ಹೆಣ್ಣು ಮಗು ಜನಿಸಿದ್ರೆ ಹೀಗೂ ಮಾಡ್ತಾರಾ!? ಈ ಕುಟುಂಬ ಮಾಡಿದ್ದೇನು?
Thursday, April 7, 2022
ಪುಣೆ: ಮೊದಲ ಬಾರಿಗೆ ಹೆಣ್ಣು ಮಗು ಜನಿಸಿದ ಸಂತಸದಲ್ಲಿ ಕುಟುಂಬವೊಂದು ತಮ್ಮ ಮುದ್ದು ಕಂದನನ್ನು ಅದ್ಧೂರಿಯಾಗಿ ಸ್ವಾಗತಿಸಲು 1 ಲಕ್ಷ ರೂಪಾಯಿ ಖರ್ಚು ಮಾಡಿ ಹೆಲಿಕಾಪ್ಟರ್ ಮೂಲಕ ಮಗುವನ್ನು ಕರೆತಂದ ಘಟನೆ ಪುಣೆಯಲ್ಲಿ ನಡೆದಿದೆ.
ಈ ಕುಟುಂಬದಲ್ಲಿ ಮದುವೆಯಾದ ಎಲ್ಲರಿಗೂ ಗಂಡು ಮಕ್ಕಳಾಗಿದೆ. ಹೆಣ್ಣು ಮಗು ಬೇಕು ಎಂದು ಹಲವು ದೇವರಲ್ಲಿ ಪಾರ್ಥನೆ ಮಾಡಿದ್ದಾರೆ. ಕೊನೆಗೂ ಈ ಕುಟುಂಬದ ಸದಸ್ಯರೊಬ್ಬರಿಗೆ ಹೆಣ್ಣು ಮಗುವಾಗಿದೆ.
ತವರು ಮನೆಯಿಂದ ಮಗುವನ್ನು ಗಂಡನ ಮನೆಗೆ ಹೆಲಿಕಾಪ್ಟರ್ ಮೂಲಕ ತರಲಾಗಿತ್ತು.
ಹೆಲಿಕಾಪ್ಟರ್‌ನ್ನು ಲ್ಯಾಂಡ್ ಮಾಡಲು ಅವರ ತೋಟದಲ್ಲೇ ತಾತ್ಕಾಲಿಕ ಹೆಲಿಪಾಡ್‌ನ್ನು ನಿರ್ಮಾಣ ಮಾಡಲಾಗಿತ್ತು.
ಹೆಲಿಕಾಪ್ಟರ್ ಮೂಲಕ ಬಂದಿಳಿದ ಮಗುವನ್ನು ಆತ್ಮೀಯವಾಗಿ ಬರಮಾಡಿಕೊಂಡು ಅಲ್ಲಿಂದ ಕಾರಿನ ಮೂಲಕ ಮನಗೆ ಕರೆದುಕೊಂಡು ಹೋಗಿದ್ದಾರೆ.