
ಉಡುಪಿ ಅಗ್ನಿ ಅವಘಡ ; ಹೊತ್ತಿ ಉರಿದ ಸುಧಾ ಫರ್ನಿಚರ್
ಉಡುಪಿ ಮಣಿಪಾಲ ರಸ್ತೆಯ ಲಕ್ಷ್ಮೀನಗರ ಬಳಿ ಇರುವ ಸುಧಾ ಫರ್ನಿಚರ್ ಶಾಫ್‌ಗೆ ಬೆಂಕಿ ತಗುಲಿ, ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದೆ.
ನಿನ್ನೆ (ಎ.21) ಮುಂಜಾನೆಯ ವೇಳೆ
ಸರ್ಕ್ಯೂಟ್ ನಿಂದ ಬೆಂಕಿ ತಗುಲಿದ್ದು, ಬೆಂಕಿ ಹೊತ್ತಿಕೊಂಡದನ್ನು ನೋಡಿದವರು ಕೂಡಲೇ ಅಗ್ನಿಶಾಮಕದಳಕ್ಕೆ ತಿಳಿಸಿದ್ದಾರೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಹರ ಸಾಹಸ ಪಟ್ಟರು. ಪಕ್ಕದ ಹೋಟೆಲ್‌ಗೂ ಬೆಂಕಿ ತಗುಲಿದೆ.
ಫರ್ನಿಚರ್ ಹಾಗೂ ಕಚ್ಚಾ ವಸ್ತುಗಳು ಬೆಂಕಿಗೆ ಆಹುತಿಯಾಗಿ ಸುಟ್ಟು ಕರಕಲಾಗಿದೆ. ಅಂದಾಜು ಸುಮಾರು 40 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..