ಅಲಿಫ್ ಮೊಹಮ್ಮದ್‌ನನ್ನು college campusನಲ್ಲಿ ಎತ್ತಿಕೊಂಡು ಬಂದ ಸಹಪಾಠಿಗಳಾದ ಆರ್ಯ ಮತ್ತು ಅರ್ಚನ
Thursday, April 7, 2022
ಕೊಲ್ಲಂ: ವಿಕಲ ಚೇತನ ವಿದ್ಯಾರ್ಥಿ ಅಲಿಫ್ ಮಹಮ್ಮದ್‌ನನ್ನು ಆತನ ಸಹಪಾಠಿಗಳಾದ ಆರ್ಯ ಮತ್ತು ಅರ್ಚನಾ ಕಾಲೇಜಿಗೆ ಎತ್ತಿ ಕರೆ ತರುವ ವೀಡಿಯೋ ಇದೀಗ ಕೇರಳದಾದ್ಯಂತ ಸಹಿತ ವಿವಿಧ ರಾಜ್ಯಗಳಲ್ಲಿ ವೈರಲ್ ಆಗಿದೆ.
ಅಂದಹಾಗೆ ಈ ಘಟನೆ ನಡೆದಿದ್ದು ಕೇರಳದ ಕೊಲ್ಲಂ ಜಿಲ್ಲೆಯ ಸಾಸ್ತಾಂಕೋಟ್ಟ ಡಿ.ಬಿ ಕಾಲೇಜಿನಲ್ಲಿ. ಇಲ್ಲಿನ ಮೂರನೇ ವರ್ಷದ ಪದವಿ ವಿದ್ಯಾರ್ಥಿಯಾದ ಅಲಿಫ್ ಮೊಹಮ್ಮದ್ ವಿಕಲಚೇತನ ಈತನನ್ನು ಪ್ರತಿದಿನ ಕಾಲೇಜಿಗೆವಕರೆತರುವುದು, ಆತನಿಗೆ ಇತರ ವಿಚಾರಗಳಿಗೆ ನೆರವಾಗುವುದು ಈತನ ಸಹಪಾಠಿಗಳಾದ ಆರ್ಯ ಮತ್ತು ಅರ್ಚನಾ.
ಇತ್ತೀಚಿಗೆ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಧರ್ಮಗಳ ನಡುವೆ ದ್ವೇಷ ಕಾರುವ ಪ್ರಸ್ತುತ ಸನ್ನಿವೇಶದಲ್ಲಿ ಇಂತಹ ಚಿತ್ರಗಳು ಮನಸ್ಸಿಗೆ ಮುದ ನೀಡುತ್ತವೆ ಎಂದು ಹಲವರು ವ್ಯಾಖ್ಯಾನಿಸಿದ್ದಾರೆ.