ಇವರೆಂತಾ ಕಾಮುಕರು? ಇವರು ಅತ್ಯಾಚಾರ ಮಾಡಿರುವ ಪ್ರಾಣಿ ಯಾವುದು ಗೊತ್ತಾ!?
Thursday, April 14, 2022
ಮುಂಬೈ: ಉಡದ (ಮಾನಿಟರ್) ಮೇಲೆ ನಾಲ್ವರು ಕಾಂಮಾಂಧರು ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ಗೋಥಾನೆ ಗ್ರಾಮದ ಬಳಿ ಇರುವ ಸಹ್ಯಾದ್ರಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ನಡೆದಿದೆ. ಪ್ರಕರಣ ಸಂಬಂಧ ನಾಲ್ವರನ್ನೂ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಸಂದೀಪ್ ತುಕ್ರಮ್, ಪವಾರ್ ಮಂಗೇಶ್, ಜನಾರ್ಧನ್ ಕಾಮ್ಟೇಕರ್ ಮತ್ತು ಅಕ್ಷಯ್ ಸುನೀಲ್ ಎಂದು ಗುರುತಿಸಲಾಗಿದೆ.
ಅರಣ್ಯದಲ್ಲಿ ಅಡ್ಡಾಡುತ್ತಿದ್ದ ಈ ನಾಲ್ವರು ಉಡದ ಮೇಲೆ ಅತ್ಯಾಚಾರ ಎಸಗಿರುವುದು ಅಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಗೊತ್ತಾಗಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯಾಧಿಕಾರಿಗಳು ನಾಲ್ವರನ್ನು ವಶಕ್ಕೆ ಪಡೆದಿದ್ದು, ಅವರ ಮೊಬೈಲ್ ಫೋನ್ ನೋಡಿದಾಗ ಅತ್ಯಾಚಾರದ ವೀಡಿಯೋ ಕೂಡಾ ಮಾಡಿರುವುದು ಗೊತ್ತಾಗಿದೆ.