
ಹಲ್ಲುಜ್ಜುವ ಮೊದಲು ನೀರು ಕುಡಿದರೆ ಏನೆಲ್ಲಾ ಆಗುತ್ತೆ..?? ದಿನಕ್ಕೆ ಎಷ್ಟು ಗ್ಲಾಸ್ ನೀರು ಕುಡಿಯಬೇಕು?? ಇಲ್ಲಿದೆ ಸಂಪೂರ್ಣ ಮಾಹಿತಿ..
Wednesday, March 9, 2022
ಪ್ರತಿದಿನ 8 ರಿಂದ 10 ಗ್ಲಾಸ್ ನೀರು ಸೇವಿಸಬೇಕು ಎಂದು ತಜ್ಞರು ನೀಡುವ ಸಲಹೆಯಾಗಿದೆ.ಹಲ್ಲುಜ್ಜುವ ಮೊದಲು ನೀರನ್ನು ಕುಡಿದರೆ ನಿಮ್ಮ ಜೀರ್ಣಕಾರಿ ಶಕ್ತಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಅದೇನೆಂದರೆ ಈ ಸಮಯದಲ್ಲಿ ಏನು ತಿಂದರೂ ಅದು ಸುಲಭವಾಗಿ ಜೀರ್ಣವಾಗುತ್ತದೆ.
ಮಲಗುವಾಗ ಬಾಯಾರಿಕೆ ಏಕೆ ಆಗುತ್ತದೆ?
ಹೆಚ್ಚಿನ ಜನರು ರಾತ್ರಿಯಲ್ಲಿ ಬಾಯಾರಿಕೆಯನ್ನು ಅನುಭವಿಸುತ್ತಾರೆ. ರಾತ್ರಿ ವೇಳೆ ನೀರು ಕುಡಿಯಲು ಅನೇಕರು ಎಚ್ಚರಗೊಳ್ಳುತ್ತಾರೆ. ವಾಸ್ತವವಾಗಿ ನೀವು ನಿದ್ದೆ ಮಾಡುವಾಗ ನಿಮ್ಮ ದೇಹವು ನೀರನ್ನು ಬಳಸುತ್ತದೆ. ಇದು ಕೆಲವೊಮ್ಮೆ ನಿಮಗೆ ರಾತ್ರಿಯಲ್ಲಿ ಬಾಯಾರಿಕೆಯನ್ನು ಉಂಟುಮಾಡುತ್ತದೆ. ಆದ್ದರಿಂದ ಬೆಳಿಗ್ಗೆ ಎದ್ದು ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನ ಕೊರತೆಯಾಗುವುದಿಲ್ಲ.
ಬಾಯಿಯಲ್ಲಿ ಬ್ಯಾಕ್ಟೀರಿಯಾ ಸಂಗ್ರಹವಾಗುವುದಿಲ್ಲ
ಹಲ್ಲುಜ್ಜುವ ಮೊದಲು ನೀವು ನೀರನ್ನು ಕುಡಿಯುತ್ತಿದ್ದರೆ ಬ್ಯಾಕ್ಟೀರಿಯಾಗಳು ಬಾಯಿಯಲ್ಲಿ ಸಂಗ್ರಹವಾಗುವುದಿಲ್ಲವೆಂದು ನಂಬಲಾಗಿದೆ. ಈ ಸಮಯದಲ್ಲಿ ನಿಮ್ಮ ಬಾಯಿ ರೋಗಾಣು ಮುಕ್ತವಾಗುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ
ಇದಲ್ಲದೇ ಬೆಳಗ್ಗೆ ಹಲ್ಲುಜ್ಜುವ ಮುನ್ನ ನೀರು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ನಿಮಗೆ ಆಗಾಗ್ಗೆ ಶೀತ ಇದ್ದರೆ ತಪ್ಪದೇ ಬೆಳಿಗ್ಗೆ ನೀರನ್ನು ಕುಡಿಯುವುನ್ನು ರೂಢಿಸಿಕೊಳ್ಳಬೇಕು. ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ನಿಮ್ಮ ತ್ವಚೆ ಮತ್ತು ಕೂದಲನ್ನು ಚೆನ್ನಾಗಿ ಇಡುತ್ತದೆ.
ಅಧಿಕ ಬಿಪಿ ಮತ್ತು ಶುಗರ್ ನಲ್ಲಿ ಪ್ರಯೋಜನಕಾರಿ
ಇದಲ್ಲದೆ ಹೆಚ್ಚಿನ ಬಿಪಿ ಮತ್ತು ಅಧಿಕ ಶುಗರ್ ಇರುವಾಗಲೂ ಬ್ರಷ್ ಮಾಡದೆ ನೀರು ಕುಡಿಯುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಮಾಧ್ಯಮಗಳ ವರದಿ ಪ್ರಕಾರ ಬೆಳಗ್ಗೆ ಹಲ್ಲುಜ್ಜದೆ ನೀರು ಕುಡಿದರೆ ಬೊಜ್ಜಿನ ಸಮಸ್ಯೆಯಿಂದ ಪಾರಾಗಬಹುದು. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಬೆಳಿಗ್ಗೆ ಹಲ್ಲುಜ್ಜುವ ಮೊದಲು ನೀರು ಕುಡಿಯುವ ಅಭ್ಯಾಸವು ನಿಮಗೆ ಪ್ರಯೋಜನವನ್ನು ನೀಡುತ್ತದೆ.