Ukren ಪ್ರಜೆಗಳು ಥಳಿಸಿ ರೈಲಿನಿಂದ ತಳ್ಳಿದರು ; ಉಡುಪಿ ವಿದ್ಯಾರ್ಥಿನಿ
Wednesday, March 9, 2022
ಉನ್ನತ ವಿದ್ಯಾಭ್ಯಾಸಕ್ಕೆ ಅಂತ ಉಕ್ರೇನ್ ತೆರಳಿ, ಯುದ್ದದ ಸಂದರ್ಭದಲ್ಲಿ ಸಿಲುಕಿದ್ದ ಮತ್ತೋರ್ವ ವಿದ್ಯಾರ್ಥಿನಿ ಅನೀಫ್ರೆಡ್ ರೆಡ್ಲೀ ಡಿಸೋಜಾ,
ಮನೆಗೆ ಸುರಕ್ಷಿತವಾಗಿ ವಾಪಾಸಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು.ತನ್ನ ಅತಂಕದ ದಿನಗಳನ್ನು ಮೆಲುಕು ಹಾಕಿರುವ ವಿದ್ಯಾರ್ಥಿನಿ , ಮಾತೃಭೂಮಿಯ ಮೇಲೆ ನನಗೆ ಪ್ರೀತಿ ಜಾಸ್ತಿಯಾಗಿದೆ.
ದಕ್ಷಿಣ ಭಾರತೀಯರಿಗೂ ಈಗ ಯುದ್ಧದ ಅನುಭವವಾಯಿತು.ತಂದೆ ತಾಯಿಯನ್ನು ನೋಡಲೆಂದೇ ಬದುಕಿ ಬಂದೆ ಎಂದ ಅನೀಫ್ರೆಡ್ ರೆಡ್ಲೀ ಡಿಸೋಜಾ,ಉಕ್ರೇನ್ ಪ್ರಜೆಗಳು ನಮ್ಮನ್ನು ಥಳಿಸಿ ರೈಲಿನಿಂದ ತಳ್ಳಿದರು ಎಂದು ತಮ್ಮ ಅನುಭವ ಹೇಳಿಕೊಂಡರು.