ಪತ್ನಿಗೆ ಸಿಗರೇಟ್ ನಿಂದ ಸುಟ್ಟು ಕಿರುಕುಳ- Viral ವಿಡಿಯೋಗೆ ವರದಕ್ಷಿಣೆ ಕಿರುಕುಳ ಕಾರಣ ಅಲ್ವಂತೆ!!
Wednesday, March 2, 2022
ಸಾಮಾಜಿಕ ಜಾಲತಾಣದಲ್ಲಿ ಉಡುಪಿಯ ಕುಂದಾಪುರದಲ್ಲಿ ನಡೆದ, ಪತ್ನಿ ಪೀಡಕ ಪತಿಯ ವಿಡಿಯೋ ವೈರಲ್ ಆಗಿ ಬಾರೀ ಆಕ್ರೋಶ ಕೇಳಿ ಬಂದಿತ್ತು,
ಸಿಗರೇಟ್ ನಿಂದ ಪತ್ನಿಯ ಮುಖವನ್ನು ಸುಡೋಕೆ ಯತ್ನಿಸುತ್ತಿರೋದು ವೀಡಿಯೋದಲ್ಲಿತ್ತು. ನಂತರ ಪತಿ ಪ್ರದೀಪ್ ಪತ್ನಿ ಪ್ರಿಯಾಂಕ, ಕುಂದಾಪುರ ಪೊಲೀಸ್ ಠಾಣೆಗೆ ವರದಕ್ಷಿಣೆ ಕಿರುಕುಳ ಅಂತ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರದೀಪ್ ಹಾಗೂ ಆತನ ತಂದೆ ಬಂಧನ ಕೂಡ ಆಗಿದೆ.
ಸದ್ಯ ಘಟನೆಗೆ ಬೇರೋಂದು ಟ್ವಿಸ್ಟ್ ಸಿಕ್ಕಿದೆ. ಪ್ರದೀಪ್ ತಾಯಿ ಹೇಳುತ್ತಿರುವ ಪ್ರಕಾರ, ವಿಡಿಯೋಗೂ ವರದಕ್ಷಿಣೆಗೂ ಸಂಬಂಧವೇ ಇಲ್ಲ. ಮಗ ಮತ್ತು ಪ್ರೀಯಾಂಕ ಪ್ರೀತಿಸಿ ಮದುವೆ ಆದ ಬಳಿಕ ಆಕೆ ತಾಯಿ ಮನೆಗೆ ಹೋಗಿಲ್ಲ, ನಾವು ಮಗಳಂತೆ ನೋಡುತ್ತಿದ್ದೆವು.ಈ ನಡುವೆ ಪ್ರೀಯಾಂಕ ತಾಯಿ ಪ್ರದೀಪ್‌ಗೆ ಆತ ಕೆಲ್ಸ ಮಾಡೋ ಸ್ಥಳದಲ್ಲಿ ಎಲ್ಲರ ಮುಂದೆ ಬೈದಿದ್ದಾಳೆ. ಇದೇ ಕೋಪದಲ್ಲಿ ಹಿಂಸೆ ಕೊಡುವ ವಿಡಿಯೋ ಆತನೇ ಮಾಡಿ. ಆಕೆಯ ತಾಯಿಗೆ ಕಳುಹಿಸಿದ್ದು, ಆದ್ರೆ ಪ್ರಿಯಾಂಕಗೆ ಸಿಗರೇಟ್ ನಿಂದ ಮುಖ ಸುಟ್ಟಿಲ್ಲ, ಇದುವರೆಗೂ ಹೊಡೆದಿಲ್ಲ ಈಗ ಪ್ರಿಯಾಂಕ ವರದಕ್ಷಿಣೆ ಕಿರುಕುಳ ಅಂತ ದೂರು ನೀಡಿ ನನ್ನ ಗಂಡ ಹಾಗೂ ಮಗನನ್ನು ಬಂಧಿಸಿದ್ದಾಳೆ.
ಆಕೆ ಹೇಳುವಂತೆ ವರದಕ್ಷಿಣೆ ಕಿರುಕುಳ ಹೌದಾದ್ರೆ ಪ್ರಿಯಾಂಕ ಧರ್ಮಸ್ಥಳ ಮುಂಜುನಾಥನ ಸನ್ನಿಧಿಯಲ್ಲಿ ಅಥವಾ ಗ್ರಾಮ ದೇವರಲ್ಲಿ ಬಂದು ಪ್ರಯಾಣ ಮಾಡ್ಲಿ ಅಂತ ಸವಾಲು ಹಾಕಿದ್ದಾರೆ