ಕೊಲ್ಲೂರು ಮೂಕಾಂಬಿಕೆಯ ಸಲಾಂ ಮಂಗಳಾರತಿ ನಿಲ್ಲಿಸುವುದು ಕೋಮುವಾದಿ ನಡೆ ; ಮಜೀದ್ ( Video)
Monday, March 28, 2022
ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ನಡೆಯುವ ಸಲಾಂ ಮಂಗಳಾರತಿ ರದ್ದತಿ ಬೇಡಿಕೆ ಸದ್ಯ ಬಾರೀ ಚರ್ಚೆ ಆಗುತ್ತಿದ್ದು, ಇದೇ ವಿಚಾರದಲ್ಲಿ ಉಡುಪಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಎಸ್ಡಿಪಿಐ ರಾಜ್ಯಾಧ್ಯಕ್ಷ ಮಜೀದ್, ಸಲಾಂ ಮಂಗಳಾರತಿ ಟಿಪ್ಪುಸುಲ್ತಾನ್ ಕುರಿತಾದ ಒಂದು ನಂಬಿಕೆ
ಇದನ್ನು ನಿಲ್ಲಿಸಬೇಕೆಂಬದು ಬೇಡಿಕೆ ಕೋಮುವಾದಿ ನಡೆ ಅಂತ ಹೇಳಿದರು.
ಟಿಪ್ಪು ತನ್ನ ರಾಜ್ಯಭಾರದ 150ಕ್ಕೂ ಅಧಿಕ ದೇವಸ್ಥಾನಗಳಿಗೆ ಅನುದಾನ ನೀಡಿದ್ದ. ಟಿಪ್ಪು ಸುಲ್ತಾನ್ ಓರ್ವ ಪರ ಧರ್ಮ ಸಹಿಷ್ಣು. ಪೇಶ್ವೆಗಳ ದಾಳಿಯಿಂದ ಶಾರದಾಂಬ ದೇವಸ್ಥಾನ ರಕ್ಷಿಸಿದ್ದ ಟಿಪ್ಪು.ಮುಸ್ಲಿಂ ದೊರೆ ಎಂಬ ಕಾರಣಕ್ಕೆ ಈ ರೀತಿಯ ನಡೆ ತೆಗೆದುಕೊಳ್ಳಬಾರದು.ರಾಜ್ಯ ಸರ್ಕಾರ ತಪ್ಪು ಸಂದೇಶ ರವಾನಿಸುತ್ತಿದೆ. ಮುಸ್ಲಿಂ ಎಂಬ ಕಾರಣಕ್ಕೆ ಇತಿಹಾಸ ತಿರುಚಬೇಡಿ ಅಂತ ತಿಳಿಸಿದರು..