
ಬಬ್ಬುಸ್ವಾಮಿ ಕೊರಗಜ್ಜನಿಗೆ ಮತ್ತು ಮರಿಯಮ್ಮನಿಗೆ ಹರಕೆ ಹೊತ್ತು ಮಗ ಸುರಕ್ಷಿತವಾಗಿ ಬರಲೆಂದು ಪ್ರಾರ್ಥಿಸಿದ ತಾಯಿ ( video)
ಉಕ್ರೇನಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳಿದ್ದ ಉಡುಪಿಯ ಉದ್ಯಾವರದ ಮೃಣಾಲ್ ಸುರಕ್ಷಿತವಾಗಿ ಮನೆ ಸೇರಿದ್ದು, ಮೃಣಾಲ್ ಸುರಕ್ಷಿತವಾಗಿ ಬರುವಂತೆ ಆಗ್ಲಿ ಅಂತ ಪೋಷಕರು ಕೊರಗಜ್ಜನಿಗೆ ಹಾಗೂ ಮರಿಯಮ್ಮನಿಗೆ ಹರಕೆ ಹೊತ್ತಿದ್ದ ವಿಚಾರ ಈಗ ಗೊತ್ತಾಗಿದೆ.
ಮೃಣಾಲ್ ತಾಯಿ ಸಂಧ್ಯಾ ಕಟಪಾಡಿ ಪೇಟೆಬೆಟ್ಟು ಬಬ್ಬು ಸ್ವಾಮಿ ಕೊರಗಜ್ಜ ದೈವಗಳಿಗೆ ತನ್ನ ಮಗ ಬರುವಂತೆ ಮಾಡು ಎಂದು ಹರಕೆ ಹೇಳಿದ್ದರು.
ಕೋಳಿ ಹರಕೆ ಹೊತ್ತಿರುವ ತಾಯಿ, ಈಗ ಹರಕೆ ತೀರಿಸುವ ಸಿದ್ಧತೆ ಮಾಡಿದ್ದಾರೆ. ಇದೇ ಸಂದರ್ಭ ಕಲ್ಮಾಡಿ ಚರ್ಚಿನಲ್ಲಿ ಆರಾಧಿಸುವ ಮರಿಯಮ್ಮ ನಿಗೆ ಮಗ ಬೇಗ ಮನೆಗೆ ಬಂದರೆ ಒಂದು ಸೀರೆ ಕೊಡುವುದಾಗಿ ಹರಕೆ ಹೇಳಿದ್ದರು. ಮಗ ಮೃಣಾಲ್ ಊರಿಗೆ ಬರುತ್ತಿದ್ದಂತೆ ಸಂತಸಗೊಂಡಿರುವ ಪೋಷಕರು ಶೀಘ್ರ ತಮ್ಮ ಎರಡು ಹರಕೆಗಳನ್ನು ತಿಳಿಸುವುದಾಗಿ ಹೇಳಿದ್ದಾರೆ.