
ರಾತ್ರಿ Lodge Roomನಲ್ಲಿ ಅವನೊಂದಿಗಿದ್ದಳು - ಬೆಳಗ್ಗೆ ಶವವಾಗಿದ್ದಳು ಆ ಹರೆಯದ ಯುವತಿ
Monday, March 7, 2022
ತಿರುವನಂತಪುರಂ: ವಿವಾಹಿತ ಸ್ನೇಹಿತನೊಂದಿಗೆ ಲಾಡ್ಜ್ ರೂಮಿನಲ್ಲಿ ತಂಗಿದ್ದ 24 ವರ್ಷದ ಯುವತಿಯೊಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ಕೇರಳದ ತಿರುವನಂತಪುರಂನ ತಂಬಾನೂರಿನಲ್ಲಿ ನಡೆದಿದೆ.
ವೀರನಕಾವು ನಿವಾಸಿ ಗಾಯತ್ರಿ ನಿಗೂಢವಾಗಿ ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದ್ದು, ಆಕೆಯ ಜೊತೆಗಿದ್ದ ಪರವೂರು ಮೂಲದ ಪ್ರವೀಣ್ ನಾಪತ್ತೆಯಾಗಿದ್ದಾನೆ.
ಶನಿವಾರ ಮಧ್ಯಾಹ್ನ ತಂಬಾನೂರಿನ ಚೋಳ ಸಾಮ್ರಾಟ್ ಹೋಟೆಲ್ನಲ್ಲಿ ಇಬ್ಬರು ರೂಮ್ ಮಾಡಿಕೊಂಡಿದ್ದರು. ಸಂಜೆ ವೇಳೆಗೆ ಕೊಠಡಿಗೆ ಬೀಗ ಹಾಕಿ ಹೋದ ಪ್ರವೀಣ್ ವಾಪಸ್ ಬಂದಿರಲಿಲ್ಲ.
ಬೆಳಗಿನ ಜಾವ ಹೋಟೆಲ್ ಸಿಬ್ಬಂದಿಗೆ ಕರೆ ಮಾಡಿ ಪ್ರವೀಣ್, ಮಧ್ಯರಾತ್ರಿ ವೇಳೆಗೆ ತನ್ನ ಗೆಳತಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾನೆ. ಹೋಟೆಲ್ ಸಿಬ್ಬಂದಿ ತಕ್ಷಣ ಕೊಠಡಿಯನ್ನು ಪರಿಶೀಲಿಸಿದಾಗ ಬಾಯಿಂದ ನೊರೆ ಬಂದು ಮಹಿಳೆ ಸಾವನ್ನಪ್ಪಿರುವುದು ಕಂಡುಬಂದಿದೆ. ಇದೀಗ ಪ್ರವೀಣ್ ಬಂಧಿಸಿರು ಪೊಲೀಸರು, ವಿಚಾರಣೆಗೊಳಪಡಿಸಿದ್ದಾರೆ.