
UDUPI-ಮಗನ ಸಾವಿಗೆ ನ್ಯಾಯ ಕೊಡಿಸುವಂತೆ ಅಂಗಲಾಚುತ್ತಿರುವ ವೃದ್ಧ ಮಹಿಳೆ
ಉತ್ತರ ಕರ್ನಾಟಕದಿಂದ ಕರಾವಳಿಗೆ ಬಂದು ಮಕ್ಕಳೊಂದಿಗೆ ವಾಸವಾಗಿದ್ದ ವೃದ್ದ ಮಹಿಳೆ ಈಗ ಮಗನ ಅಸಹಜ ಸಾವಿಗೆ ನ್ಯಾಯ ಕೊಡಿ ಅಂತ ಅಂಗಲಾಚುತ್ತಿದ್ದಾಳೆ.
ಉಡುಪಿ ಮಣಿಪಾಲದ ಹೊರವಲಯದಲ್ಲಿ ಬದುಕು ಸಾಗಿಸುತ್ತಿರುವ ನೂರ್ ಜಹಾನ್ , ಮೂರು ದಶಕಗಳ ಹಿಂದೆ ಬಾಗಲಕೋಟೆಯಿಂದ ವಲಸೆ ಬಂದ ಈಕೆಗೆ ಇಬ್ಬರು ಮಕ್ಕಳು. ಗಂಡ ಇಲ್ಲದಿದ್ದರೂ ಬೆಳೆದ ಮಕ್ಕಳ ಆಶ್ರಯದಲ್ಲಿ ಈ ಅಮ್ಮ ಇದ್ದಳು.ಆದರೆ ಎರಡು ವರ್ಷಗಳ ಹಿಂದೆ ಒಬ್ಬ ಮಗ ಕ್ಯಾನ್ಸರ್ ಗೆ ತುತ್ತಾದ. ಮಗನಿಗೆ ಶಸ್ತ್ರ ಚಿಕಿತ್ಸೆ ಆಗಿದೆ. ಕೂಲಿ ನಾಲಿ ಮಾಡುತ್ತಾ ,ಇದ್ದ ನೂರ್ ಜಹಾನ್, ಎರಡನೇ ಮಗ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾನೆ.
ಆತನ ಶವ ಮಣ್ಣಪಳ್ಳ ಕೆರೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಿಕ್ಕಿದೆ. ಈತನದ್ದು ಕೊಲೆ ಎಂಬ ಶಂಕೆ ಮಹಿಳೆಯದ್ದು, ಯಾಕಂದ್ರೆ ಒಳ್ಳೆಯ ಈಜುಗಾರನಾಗಿದ್ದ ಆತನ ನೀರಿಗೆ ಬಿದ್ದು ಸಾವನ್ಪಿದನ್ನು ಮಹಿಳೆ ಒಪ್ಪುದಿಲ್ಲ. ಹೀಗಾಗಿ ಮಗನ ಸಾವಿಗೆ ನ್ಯಾಯ ಕೊಡಿ ಅಂತ ಮಹಿಳೆ ಕಣ್ಣೀರು ಹಾಕ್ತಿದ್ದಾಳೆ.
ಇನ್ನೂ ಮಗನ ಸಾವಿನ ಹಿಂದೆ ಒಂದು ಅನುಮಾನ ಕೂಡ ಇದೆ. ಯಾಕಂದ್ರೆ ಇದೇ ಮಣಿಪಾಲದ ನಡೆದ ಕೇಸ್ ಒಂದರಲ್ಲಿ ಪ್ರಮುಖ ಸಾಕ್ಷಿ ಇದೇ ಮಹಿಳೆ ಮಗ ಆಗಿದ್ದ ಹಾಗಾಗಿ ಇದೇ ವಿಷಯದಲ್ಲಿ ಕೊಲೆ ಆದ ಅನುಮಾನ ಕೂಡ ಇದೆ.