ಶನಿ ದೇವರು ನಿಮ್ಮ ಕನಸಿನಲ್ಲಿ ಬಂದರೆ ಮುಂದೆ ಏನೆಲ್ಲಾ ಪರಿಣಾಮಗಳು ಎದುರಾಗುತ್ತವೆ ಗೊತ್ತಾ..??
Tuesday, March 15, 2022
ಶನಿ ದೇವರಿಗೆ ಸಂಬಂಧಿಸಿದ ಕನಸುಗಳು ಬಿದ್ದರೆ, ಅದು ನಿಮ್ಮ ಜೀವನದಲ್ಲಿ ಕೆಲವು ಪ್ರಮುಖ ಬದಲಾವಣೆಗಳಿಗೆ ಕಾರಣವಾಗಬಹುದು ಎನ್ನುವುದನ್ನು ತೋರಿಸುತ್ತದೆ. ಶನಿದೇವನು ನಿಮ್ಮ ಮೇಲೆ ಕೃಪೆ ತೋರುತ್ತಾನೆಯೋ ಅಥವಾ ಅವನ ಅವಕೃಪೆಗೆ ಪಾತ್ರವಾಗಬೇಕಾಗುತ್ತದೆಯೋ ಎನ್ನುವುದನ್ನು ಕನಸುಗಳು ಹೇಳುತ್ತವೆ.
ಕನಸಿನಲ್ಲಿ ಶನಿದೇವನ ವಿಗ್ರಹ ಅಥವಾ ಚಿತ್ರ ಕಂಡುಬಂದರೆ, ಮುಂಬರುವ ಸಮಯವು ನಿಮಗೆ ಸಂತೋಷವನ್ನು ನೀಡುತ್ತದೆ ಎಂದರ್ಥ. ವ್ಯಕ್ತಿಯು ತನ್ನ ಜಾತಕದಲ್ಲಿ ಶನಿಯ ಸ್ಥಾನಕ್ಕೆ ಅನುಗುಣವಾಗಿ ಈ ಕನಸಿನ ಫಲಿತಾಂಶವನ್ನು ಪಡೆಯುತ್ತಾನೆ ಜಾತಕದಲ್ಲಿ ಶನಿಯ ಸ್ಥಾನ ಶುಭವಾಗಿದ್ದರೆ ಉತ್ತಮ ಫಲಿತಾಂಶಗಳು ಬರುತ್ತವೆ.
ನಿಮ್ಮ ಕನಸಿನಲ್ಲಿ ಶನಿದೇವನು ನಿಮ್ಮನ್ನು ಆಶೀರ್ವದಿಸಿದರೆ, ಈ ಕನಸು ತುಂಬಾ ಮಂಗಳಕರವಾಗಿರುತ್ತದೆ. ಇದರರ್ಥ ಶನಿದೇವನು ನಿಮ್ಮ ಜೀವನದ ಎಲ್ಲಾ ತೊಂದರೆಗಳನ್ನು ಕೊನೆಗೊಳಿಸಲಿದ್ದಾನೆ. ಅನಾರೋಗ್ಯ ಪೀಡಿತ ವ್ಯಕ್ತಿಯು ಇಂಥಹ ಕನಸನ್ನು ಕಂಡರೆ, ಅವನ ರೋಗಗಳು ಶೀಘ್ರದಲ್ಲಿಯೇ ಕೊನೆಯಾಗಲಿದೆ ಎನ್ನುವುದನ್ನು ಸೂಚಿಸುತ್ತದೆ.
ಕನಸಿನಲ್ಲಿ ಶನಿದೇವರ ದೇವಸ್ಥಾನ ಕಂಡರೆ , ಶನಿದೇವನ ಆಶೀರ್ವಾದ ನಿಮ್ಮ ಮೇಲಿರಲಿದೆ ಎಂದರ್ಥ. ಅಂತಹ ಕನಸು ವ್ಯಕ್ತಿಗೆ ದೊಡ್ಡ ಮಟ್ಟದ ಆರ್ಥಿಕ ಲಾಭವಾಗುತ್ತದೆ ಎನ್ನುವುದನ್ನು ತೋರಿಸುತ್ತದೆ. ಜೊತೆಗೆ ಕೆಲವು ಪ್ರಮುಖ ಕೆಲಸದಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯನ್ನು ತೋರಿಸುತ್ತದೆ.