ನಿಮಗೆ SDPI ಯವರು ಬೇಕಾ, BJP ಯವರು ಬೇಕಾ
Friday, March 4, 2022
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೊಳಪಟ್ಟ ಸಂಪರ್ಕ ಸೇತುವೆಯ ಉದ್ಘಾಟನೆ ವೇಳೆ ಶಾಸಕ ಸಂಜೀವ ಮಠಂದೂರು ಅವರ ಸಮ್ಮುಖದಲ್ಲೇ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರು ಪರಸ್ಪರ ವಾಗ್ವಾದಕ್ಕಿಳಿದ ಘಟನೆ ನಡೆದಿದೆ.
ಮುಂಚಿರಬೆಟ್ಟು, ಕಾನ, ಇಡೆಮಜಲು, ಬದಿಯಾರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಉದ್ಘಾಟನೆಗೆ ಶಾಸಕರು ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ.
ಅಲ್ಲಿ ಕಾಂಕ್ರೀಟ್ ನಡೆಸಲು ಉದ್ದೇಶಿಸಿದ್ದ ಜಾಗಕ್ಕೆ ಸಂಬಂಧಿಸಿದಂತೆ ಸ್ಥಳೀಯವಾಗಿ ಇದ್ದ ವಿವಾದವೇ ಈ ವಾಗ್ವಾದಕ್ಕೆ ಕಾರಣ ಎನ್ನಲಾಗಿದೆ.
ರಸ್ತೆಗೆ ಜಾಗ ಬಿಟ್ಟುಕೊಡಲು ಕೆಲವರು ಒಪ್ಪದಿದ್ದೂ, ಇದೀಗ ಅವರಿಗೆ ಅನುಕೂಲವಾಗುವಂತೆ ಸೇತುವೆ ನಿರ್ಮಾಣ ಮಾಡುತ್ತಿರುವುದಾಗಿ ಆರೋಪಿಸಿ ತಗಾದೆ ಎತ್ತಿದ್ದಾರೆ.
ಈ ವೇಳೆ 'ನಿಮಗೆ ಮಸ್ಲಿಮರು ಅಥವಾ ಎಸ್ಡಿಪಿಐಯವರು ಬೇಕಾ ಇಲ್ಲ ನಾವು ಬೇಕಾ' ಎಂದು ಕಾರ್ಯಕರ್ತನೊಬ್ಬ ಪ್ರಶ್ನಿಸಿದ್ದು ಈಗ ಎಲ್ಲಡೆ ವೈರಲ್ ಆಗಿದೆ.