
ಬಜೆಟ್ ನಲ್ಲಿ ಗೋಶಾಲೆ ಹೆಚ್ಚಿಸುವ ನಿರ್ಧಾರ- ಸಿಎಂ ನ್ನು ಶ್ಲಾಘಿಸಿದ ಪೇಜಾವರ ಸ್ವಾಮೀಜಿ
ಉಡುಪಿ; ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್‌ನ್ನು ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮೆಚ್ಚಿಕೊಂಡಿದ್ದಾರೆ. ಗೋವುಗಳ ರಕ್ಷಣೆಗೆ ಇದ್ದ ಗೋಶಾಲೆಗಳನ್ನು ಹೆಚ್ಚಿಸುವ ಸರಕಾರದ ನಡೆಯನ್ನು ಸ್ವಾಮೀಜಿ ಶ್ಲಾಘಿಸಿದ್ದಾರೆ .
ಉಡುಪಿಯಲ್ಲಿ ಮಾತನಾಡಿರುವ ಪೇಜಾವರ ಶ್ರೀ, ಗೋಶಾಲೆಗೆ ಅನುದಾನ ಹೆಚ್ಚಿಸಿರುವುದು ನಮಗೆ ಬಹಳ ಸಂತೋಷವಾಗಿದೆ. ಪಶುವೈದ್ಯರ ಹೆಚ್ಚಳ ಮಾಡಲಾಗಿದೆ ಗೋವುಗಳ ಆರೋಗ್ಯ ರಕ್ಷಣೆಗೆ ಸರಕಾರ ಒತ್ತು ಕೊಟ್ಟಿದೆ.
ದೇವಾಲಯಗಳ ಅರ್ಚಕರ ವೇತನ ಹೆಚ್ಚು ಮಾಡಲಾಗಿದೆ. ಗೌರವ ಅಧ್ಯಾಪಕರುಗಳ ಸಂಭಾವನೆ ಹೆಚ್ಚಿಸಿದ್ದಾರೆ. ಕ್ಯಾನ್ಸರ್ ಆಸ್ಪತ್ರೆಯ ಸ್ಥಾಪನೆಯ ನಿರ್ಧಾರ. ದೇವಾಲಯಗಳ ಸ್ವಾಯತ್ತ ವಿಚಾರ ಸಂತಸ ನೀಡಿದೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಧನ್ಯವಾದಗಳು ಎಂದರು.