ಉಡುಪಿ- ಮಲ್ಪೆ ಕಡಲತೀರದಲ್ಲಿ ಶಿವನ ಮರಳು ಶಿಲ್ಪಾಕೃತಿ
Tuesday, March 1, 2022
ಶಿವರಾತ್ರಿಯ ಪ್ರಯುಕ್ತ "ಹರ ಹರ ಮಹಾದೇವ "
ಶೀರ್ಷಿಕೆಯಡಿಯಲ್ಲಿ ಉಡುಪಿಯ ಮಲ್ಪೆ ಕಡಲ ತೀರದಲ್ಲಿ ವಿಶೇಷ ಮರುಳು ಶಿಲ್ಪಾಕಲಾಕೃತಿ ರಚಿಸಲಾಗಿದೆ.
ಮಣಿಪಾಲ ತ್ರಿವರ್ಣ ಕಲಾ ಕೇಂದ್ರದ ಹವ್ಯಾಸಿ ಕಲಾವಿದ ಹರೀಶ್ ಸಾಗ ಮಾರ್ಗದರ್ಶನದಲ್ಲಿ, ವಿದ್ಯಾರ್ಥಿಗಳು ಶಿವನ ಮರಳು ಶಿಲ್ಪಾಕೃತಿ ರಚಿಸಿದ್ದು, ಶಿವನ ಮರಳು ಶಿಲ್ಪಾಕೃತಿಯ ಜೊತೆಗೆ ಹರಹರ ಮಹಾದೇವ ಅಂತ ಬರೆಯಲಾಗಿದೆ.
ಶಿವರಾತ್ರಿ ಹಬ್ಬದ ರಜೆ ಹಿನ್ನೆಲೆಯಲ್ಲಿ ಸಾವಿರಾರು ಪ್ರವಾಸಿಗರು ಮಲ್ಪೆ ಆಗಮಿಸುದ್ದು, ದಡದಲ್ಲಿ ನಿರ್ಮಿಸಿದ ಮರಳು ಶಿಲ್ಪಾಕೃತಿ ನೋಡಿ, ಸೆಲ್ಪಿ ಕ್ಲಿಕಿಸಿಕೊಳ್ಳುತ್ತಿದ್ದಾರೆ..