KUNDAPURA- ಪತ್ನಿಗೆ ಸಿಗರೇಟ್ ನಿಂದ ಸುಟ್ಟು ಚಿತ್ರಹಿಂಸೆ- ವಿಡಿಯೋ ವೈರಲ್
Tuesday, March 1, 2022
ವಿಕೃತ ಮನಸ್ಸಿನ ದುಷ್ಟ ಗಂಡನೊಬ್ಬ ಪತ್ನಿಗೆ ಸಿಗರೇಟಿನಿಂದ ಸುಟ್ಟು ಚಿತ್ರಹಿಂಸೆ ಕೊಡುತ್ತಿರುವ ದೃಶ್ಯ ವೈರಲ್ ಆಗಿದೆ.
ಉಡುಪಿ ಜಿಲ್ಲೆಯ ಕುಂದಾಪುರದ ತಾಲೂಕಿನ ಬಾರೆಬೆಟ್ಟು ನಡೆದ ಘಟನೆ ಇದಾಗಿದ್ದು, ಸಿಗರೇಟ್ ನಿಂದ ಸುಡಬೇಡ, ನನಗೆ ನೋವಾಗುತ್ತಿದೆ ಎಂದು ಅಂಗಲಾಚಿ ಕಾಲಿಗೆ ಬಿದ್ದು ಕ್ಷಮೆ ಕೇಳಿದರು ಪಾಪಿ ಗಂಡ ವಿಕೃತಿ ಮೆರದಿದ್ದಾನೆ.
ದೌರ್ಜನ್ಯಕ್ಕೊಳಗಾಗಿರುವ ಮಹಿಳೆ ಪ್ರಿಯಾಂಕ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಿನ್ನ ತಾಯಿ ಕ್ಷಮೆ ಕೇಳಬೇಕು. ನೀನು ನನ್ನ ಕಾಲಿಗೆ ಬೀಳಬೇಕು ಎಂದು ವೀಡಿಯೋದಲ್ಲಿ ಆರೋಪಿ ಒತ್ತಾಯಿಸಿದ್ದಾನೆ. ಕುಂದಾಪುರ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ. ಆರೋಪಿ ಪ್ರದೀಪ್ ಪೂಜಾರಿನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ..