ಉಡುಪಿ-ಅಣ್ಣತಮ್ಮಂದಿರ ಜಗಳ ಕೊಲೆಯಲ್ಲಿ ಅಂತ್ಯ
Saturday, March 19, 2022
ಮನೆಯ ವಿಚಾರಕ್ಕೆ ಸಂಬಂಧಿಸಿದ ಅಣ್ಣ ತಮ್ಮಂದಿರ ನಡುವಿನ ವಿವಾದ ಕೊಲೆಯಲ್ಲಿ ಅಂತ್ಯವಾದ ಘಟನೆ ಉಡುಪಿಯ 80 ಬಡಗುಬೆಟ್ಟು ಗ್ರಾಮದ ಕಬ್ಯಾಡಿ ಕಂಬ್ಳಕಟ್ಟೆ ಇಲ್ಲಿ ನಡೆದಿದೆ.
ಇಲ್ಲಿಯ ನಿವಾಸಿ ಬಾಲಕೃಷ್ಣ ನಾಯ್ಕ್(43ವ) ಕೊಲೆಯಾದವರು. ಬಾಲಕೃಷ್ಣ ಮತ್ತು ಅವರ ತಮ್ಮನಾದ ದಯಾನಂದ ರಿಗೆ ಮನೆಯ ವಾಸ್ತವ್ಯಕ್ಕೆ ಸಂಬಂಧಪಟ್ಟಂತೆ ವಿವಾದ ಇದ್ದಿತ್ತು.
ಇದೇ ವಿಚಾರವಾಗಿ ಅಣ್ಣ ತಮ್ಮಂದಿರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಬಾಲಕೃಷ್ಣ ರ ತಲೆಗೆ ಆರೋಪಿ ದಯಾನಂದ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ಇದರಿಂದಾಗಿ ತೀವ್ರ ರಕ್ತ ಸ್ತ್ರಾವದಿಂದಾಗಿ ಬಾಲಕೃಷ್ಣ ಮೃತಪಟ್ಟಿದ್ದಾರೆ. ಪೋಲಿಸ್ ತನಿಖೆ ಮುಂದುವರಿದಿದೆ.