
ಉಡುಪಿಯಲ್ಲಿ 27 ವರ್ಷದ ಯುವತಿ ನಾಪತ್ತೆ
ತನ್ನ ಎರಡೂವರೆ ವರ್ಷದ ಮಗುವನ್ನು ಮನೆಯಲ್ಲಿ ಬಿಟ್ಟು ಹೋದ ಮಹಿಳೆ ಮರಳಿ ಮನೆಗೆ ಬಾರದೇ ನಾಪತ್ತೆ ಆದ ಘಟನೆ ಉಡುಪಿ ನಗರದ ಕೊರಂಗ್ರಪಾಡಿ ಎಂಬಲ್ಲಿ ನಡೆದಿದೆ.
ಅಕ್ಷತಾ (27) ನಾಪತ್ತೆಯಾದ ಮಹಿಳೆ. ಕೋಲು ಮುಖ ಹೊಂದಿರುವ ಅಕ್ಷತಾ, 5 ಅಡಿ ಎತ್ತರವಿದ್ದು ಕನ್ನಡ ಭಾಷೆ ಮಾತನಾಡುತ್ತಾರೆ. ಅಕ್ಷತಾ ಬಗ್ಗೆ ಕಂಡು ಬಂದರೆ ಉಡುಪಿ ನಗರ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಕೋರಿದ್ದಾರೆ.