
ಈ ಗಿಡಗಳನ್ನು ನಿಮ್ಮ ಮನೆಯ ಬಳಿ ನೆಟ್ಟರೆ ಸೊಳ್ಳೆ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ...!!
2. ಲ್ಯಾವೆಂಡರ್ ಸಸ್ಯ : ಈ ಸಸಿಯ ಸುತ್ತ ಸೊಳ್ಳೆಗಳು ಮಾತ್ರವಲ್ಲ, ಇತರ ಯಾವ ಕೀಟಗಳು ಕೂಡಾ ಬರುವುದಿಲ್ಲ. ಲ್ಯಾವೆಂಡರ್ ಸಸ್ಯದ ಎಲೆಗಳಲ್ಲಿ ಕಂಡುಬರುವ ಎಸೆನ್ಶಿಯಲ್ ಆಯಿಲ್ ಕಾರಣದಿಂದ ಈ ಸಸ್ಯದಿಂದ ಸುಗಂಧ ಹೊರ ಹೊಮ್ಮುತ್ತದೆ.
3. ತುಳಸಿ ಮತ್ತು ಪುದೀನ ಗಿಡ : ತುಳಸಿ ಮತ್ತು ಪುದೀನ ಎರಡರಲ್ಲೂ ಔಷಧೀಯ ಗುಣಗಳಿರುತ್ತವೆ. ಸೊಳ್ಳೆಗಳನ್ನು ಮನೆಯಿಂದ ದೂರವಿರಿಸಲು ತುಳಸಿ ಮತ್ತು ಪುದೀನ ಸಹಾಯ ಮಾಡುತ್ತದೆ. ತುಳಸಿ ಎಲೆಗಳಿಂದ ಹೊರ ಬರುವ ಪರಿಮಳವು ಸೊಳ್ಳೆಗಳು ಮತ್ತು ಕೀಟಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ಪುದೀನ ಸಸ್ಯವು ಸೊಳ್ಳೆಗಳು ಮಾತ್ರವಲ್ಲ ನೊಣಗಳು ಮತ್ತು ಇರುವೆಗಳನ್ನು ಕೂಡಾ ಮನೆಯಿಂದ ದೂರವಿರಿಸುತ್ತದೆ