Live TV ಚರ್ಚೆಯಲ್ಲಿಯೇ ತನ್ನ ಕೋಟ್ ಕಳಚಿ ಪ್ರತ್ಯುತ್ತರ ನೀಡಿದ ಆಂಕರ್- ಯಾಕೆ ಗೊತ್ತಾ?
Friday, March 4, 2022
ಎರ್ನಾಕುಲಂ: ಹಿಜಾಬ್ ಕುರಿತ ಟಿವಿ ಪ್ಯಾನಲ್ ಚರ್ಚೆಯ ವೇಳೆ ಚರ್ಚೆಗೆ ಆಗಮಿಸಿದ್ದ ಅತಥಿಗೆ ಪ್ರತ್ಯುತ್ತರ ನೀಡುವ ಸಲುವಾಗಿ ನಿರೂಪಕ ಲೈವ್ ಶೋನಲ್ಲೆ ತನ್ನ ಕೋಟ್ ಕಳಚಿದ ಘಟನೆ ನಡೆದಿದೆ.
ಅಂದಹಾಗೆ ಈ ಘಟನೆ ನಡೆದಿರುವುದು ಕೇರಳದ ಮೀಡಿಯಾ ಒನ್ ಎಂಬ ಮಲಯಾಳಂ ಚಾನೆಲ್‌ನಲ್ಲಿ.
ಈ ಚಾನೆಲ್‌ನಲ್ಲಿ ಕರ್ನಾಟಕದಲ್ಲಿ ಉಂಟಾದ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರದ ಅತಿಥಿಗಳೊಂದಿಗೆ ಚರ್ಚೆ ನಡೆಯುತ್ತಿತ್ತು. ಈ ವೇಳೆ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕೆನಡಿ ಎಂಬ ಅತಿಥಿ 'ಪ್ರತಿಯೊಂದು ಸಂಸ್ಥೆಗೂ ವಸ್ತ್ರ ಸಂಹಿತೆ ಇರುತ್ತದೆ. ತಮ್ಮ ಚಾನೆಲ್‌ನಲ್ಲಿ ತಮಗೆ ಕೋಟು ಇಲ್ಲದೆ ಸುದ್ದಿ ನಿರೂಪಿಸಲು ಸಾಧ್ಯವೇ ಎಂದು ಉದಾಹರಣೆಯನ್ನು ನೀಡಿದ್ದರು.
ಇದಕ್ಕೆ ಪ್ರತಿಕ್ರಯಿಸಿದ ನಿರೂಪಕ ನಿಶಾದ್ ರಾವುತರ್ ನಮ್ಮ ಸಂಸ್ಥೆಯಲ್ಲಿ ಹೇಗೂ ಸುದ್ದಿ ಓದಬಹುದು. ಹಿಜಾಬ್ ಧರಿಸಿಯೂ, ಧರಿಸದೆಯೂ; ಕೋಟ್ ಧರಿಸಿಯೂ, ಧರಿಸದೆಯೂ ಸುದ್ದಿ ಓದಬಹುದು ಎಂದರಲ್ಲದೇ, ಲೈವ್ ನಲ್ಲೇ ತನ್ನ ಕೋಟ್ ಕಳಚುವ ಮೂಲಕ ಹೇಗೂ ಸುದ್ದಿ ಓದಬಹುದು ಎಂದು ನಿರೂಪಿಸಿದ್ದು, ಪ್ರೇಕ್ಷಕರ ಅಚ್ಚರಿಗೆ ಕಾರಣವಾಯಿತು.