ಚರ್ಮಕ್ಕೆ ಚರ್ಮ ತಾಗಿದರೆ ಮಾತ್ರ ಅತ್ಯಾಚಾರ- ವಿವಾದಿತ ತೀರ್ಪು ನೀಡಿದ JUDGE ಪುಷ್ಪಾ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರಪತಿ
Tuesday, March 15, 2022
ನವದೆಹಲಿ : ಅತ್ಯಾಚಾರ ಪ್ರಕರಣವೊಂದರಲ್ಲಿ ' ಚರ್ಮಕ್ಕೆ ಚರ್ಮ ತಾಗಿದರೆ ಮಾತ್ರವೇ ಅತ್ಯಾಚಾರ ಎನ್ನಿಸಿಕೊಳ್ಳುತ್ತದೆ , ಎಂದು ವಿವಾದಿತ ತೀರ್ಪನ್ನು ನೀಡಿದ್ದ ಮುಂಬಯಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿ ಪುಷ್ಪಾ ಗನೇಡಿವಾಲಾ ಅವರ ರಾಜೀನಾಮೆ ಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಗೀಕರಿಸಿದ್ದಾರೆ .
ಪೋಸ್ಕೊ ಕಾಯಿದೆ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ಪುಷ್ಪಾ ಅವರು ನೀಡಿದ್ದ ಚರ್ಮಕ್ಕೆ ಚರ್ಮ ತಾಗಿದರೆ ಮಾತ್ರವೇ ಅತ್ಯಾಚಾರ ಎನ್ನಿಸಿಕೊಳ್ಳುತ್ತದೆ ತೀರ್ಪು ತೀವ್ರ ವಿವಾದ ಸೃಷ್ಟಿಸಿತ್ತು .
ಹೀಗಾಗಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಅವರನ್ನು ಖಾಯಂ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಅಥವಾ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಅವರ ಸೇವಾವಧಿಯನ್ನು ವಿಸ್ತರಿಸಲು ಶಿಫಾರಸು ಮಾಡಿರಲಿಲ್ಲ . ಹೀಗಾಗಿ ಮುಂಬಯಿ ಹೈಕೋರ್ಟ್‌ನ ನಾಗ್ಪುರ ಪೀಠದಲ್ಲಿ ಹೆಚ್ಚುವರಿ ನ್ಯಾಯಮೂರ್ತಿಯಾಗಿದ್ದ ಅವರು ತಮ್ಮ ಸೇವಾವಧಿಯ ಕೊನೆಯ ದಿನವಾದ ಕಳೆದ ಫೆ .13 ರಂದು ರಾಜೀನಾಮೆಯನ್ನು ನೀಡಿದ್ದರು . ಒಂದು ತಿಂಗಳ ಬಳಿಕ ಅವರ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ .