
ಹಿಜಾಬ್ ತೀರ್ಪು- ಅಂಬೇಡ್ಕರ್ ಬದುಕಿದ್ದರೆ ಕಣ್ಣೀರು ಹಾಕುತ್ತಿದ್ದರು ; ಉಡುಪಿಯಲ್ಲಿ ಆಲಿಯಾ
Tuesday, March 15, 2022
ಹಿಜಾಬ್ ವಿವಾದ ಹೈ ಕೋರ್ಟ್ ಅಂತಿಮ ತೀರ್ಪು ಇಂದು ಪ್ರಕಟವಾಗಿದ್ದು, ಸಮವಸ್ತ್ರ ಬಿಟ್ಟು ಬೇರೆ ಯಾವುದೇ ವಸ್ತ್ರಗಳಿಗೆ ಅವಕಾಶ ಇಲ್ಲ ಅಂತಾ ಕೋರ್ಟ್ ಸ್ಪಷ್ಟವಾಗಿ ಹೇಳಿದೆ..ಆದರೆ ಆದೇಶದ ಕುರಿತು ಹಿಜಾಬ್ ವಿವಾದ ಆರಂಭಿಸಿದ ಉಡುಪಿ ಕಾಲೇಜಿನ ಆರು ಮಂದಿ ವಿದ್ಯಾರ್ಥಿನಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ವಿದ್ಯಾರ್ಥಿನಿಯರು,ಹಿಜಾಬ್ ಧರಿಸೋದು ನಮ್ಮ ಧಾರ್ಮಿಕ ಹಕ್ಕು, ಕುರಾನ್ ಹೇಳಿದಂತೆ ನಾವು ನಡೆಯುತ್ತೇವೆ ಅಂತಾ ಹೇಳಿದ್ದಾರೆ.. ಕೋರ್ಟ್ ನಲ್ಲಿ ನಮಗೆ ಹಕ್ಕು ಸಿಗುತ್ತೆ ಅನ್ನೋ ನಂಬಿಕೆ ಇತ್ತು..ಆದರೆ ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕಿಲ್ಲ..ನಾವು ನ್ಯಾಯ ಸಿಗೋವರೆಗೂ ಕಾಲೇಜಿಗೆ ಹಿಜಾಬ್ ಇಲ್ಲದೆ ಹೋಗಲ್ಲ..ಕುರಾನ್ ನಲ್ಲಿ ಹೇಳಿರೋದ್ರಿಂದ ನಾವು ಹಿಜಾಬ್ ಗೆ ಶಿಕ್ಷಣ ತ್ಯಾಗ ಮಾಡುತ್ತಿದ್ದೇವೆ.ನಾವು ಇನ್ನು ಮುಂದೆ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇವೆ ಅಂತ ವಿದ್ಯಾರ್ಥಿನಿ ಆಲಿಯಾ ಅಸಾದಿ ಹೇಳಿದ್ದಾರೆ.
ರಾಜಕೀಯ ಲಾಭಕ್ಕೆ ಈ ವಿಚಾರ ವನ್ನು ಕಮ್ಯೂನಲ್ ಮಾಡಲಾಗಿದೆ. ರಾಜಕೀಯ ದುರುದ್ದೇಶದಿಂದ ದೊಡ್ಡ ವಿಷಯ ಮಾಡಿದ್ದಾರೆ..ಇದರಿಂದ ಎಲ್ಲರ ಶಿಕ್ಷಣ ಕ್ಕೆ ಬಹಳ ಸಮಸ್ಯೆ ಆಗಿದೆ..ಪ್ರಾಂಶುಪಾಲರು ಹಿಜಾಬ್ ಅವಕಾಶ ಕೊಟ್ಟಿದ್ದರೆ ಈ ಸಮಸ್ಯೆಗಳನ್ನು ಆಗುತ್ತಿರಲಿಲ್ಲ..ಇದು ಹಿಜಾಬ್ ಗೆ ತಡೆ ಅಲ್ಲ.ಇದು ನಮ್ಮ ಶಿಕ್ಷಣದ ತಡೆ..ನಮಗೆ ಧರ್ಮ ಮತ್ತು ಶಿಕ್ಷಣ ಬಹಳ ಮುಖ್ಯ.ನಮಗೆ ಎರಡೂ ಅವಕಾಶ ಬೇಕು..ಡಾ. ಬಿ.ಆರ್ ಅಂಬೇಡ್ಕರ್ ಸಂವಿಧಾನ ರಚನೆ ಮಾಡಿದ್ದಾರೆ. ಅಂಬೇಡ್ಕರ್ ಬದುಕಿದ್ದರೆ ಇಂದು ಕಣ್ಣೀರು ಹಾಕುತ್ತಿದ್ದರು..ಸಂವಿಧಾನದ ಈಗಿನ ಪರಿಸ್ಥಿತಿ ನೋಡಿ ಕಣ್ಣೀರು ಹಾಕುತ್ತಿದ್ದರು ಅಂತ ಆಲಿಯಾ ಹೇಳಿದ್ದಾರೆ..