DRIVING ಸೀಟ್ ನಲ್ಲಿದ್ದ ಲಾರಿ ಚಾಲಕನಿಗೆ ಹಲ್ಲೆ ಮಾಡಿದ ವಿಡಿಯೋ ವೈರಲ್
Thursday, March 10, 2022
ಲಾರಿ ಚಾಲಕನಿಗೆ ಕ್ಷುಲ್ಲಕ ಕಾರಣಕ್ಕಾಗಿ ನಡು ರಸ್ತೆಯಲ್ಲಿಯೇ ಕಾರು ಚಾಲಕನೊಬ್ಬ ಹಲ್ಲೆಗೈದ ಉಡುಪಿಯ ಕುಂದಾಪುರದ ಘಟನೆ ಕಾಳಾವರ ಸಮೀಪದ ಅಸೋಡಿನಲ್ಲಿ ನಡೆದಿದೆ.
ನ್ಯಾಯ ಬೆಲೆ ಅಂಗಡಿಗಳಿಗೆ ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿ ಚಾಲಕ ಮಹಮ್ಮದ್ ಇಸಾಕ್ ಅವರಿಗೆ, ಹಿಂದಿನಿಂದ ಬಂದ ರಿಟ್ಸ್ ಕಾರಿನ ಚಾಲಕ, ಕಾರನ್ನು ಮುಂದಕ್ಕೆ ತಂದು ನಿಲ್ಲಿಸಿ ಹಲ್ಲೆಗೈದಿದ್ದಾನೆ.
ಕಾರು ಚಾಲಕ ಕಾರಿನಿಂದ ಇಳಿದು ಹೋಗಿ ಲಾರಿ ಚಾಲಕನಿಗೆ ಹೊಡೆಯುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾರು ಚಾಲಕನ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕಾರು ಚಾಲಕನ ವಿರುದ್ಧ ಇಸಾಕ್ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.