-->

Delhi: ಸಾರಿಗೆ ಬಸ್‌ನ ಮಹಿಳಾ ಸೀಟ್‌ನಲ್ಲಿ ಕುಳಿತಿದ್ದ 'ಆಕೆ'ಯ ಹಿಜಾಬ್ ತೆಗೆಸಿದಾಗ ಪ್ರಯಾಣಿಕರೆಲ್ಲರೂ shock!

Delhi: ಸಾರಿಗೆ ಬಸ್‌ನ ಮಹಿಳಾ ಸೀಟ್‌ನಲ್ಲಿ ಕುಳಿತಿದ್ದ 'ಆಕೆ'ಯ ಹಿಜಾಬ್ ತೆಗೆಸಿದಾಗ ಪ್ರಯಾಣಿಕರೆಲ್ಲರೂ shock!

ದೆಹಲಿ: ಬಸ್​ನಲ್ಲಿ ಉಚಿತವಾಗಿ ಪ್ರಯಾಣಿಸುವ ಉದ್ದೇಶದಿಂದ (ದೆಹಲಿ ಸಾರಿಗೆ ಬಸ್‌ನಲ್ಲಿ ಮಹಿಳೆಯರಿಗೆ ಪ್ರಯಾಣಿಸಲು ಯಾವುದೇ ಶುಲ್ಕ ಇಲ್ಲ) ಯುವಕನೊಬ್ಬ ಹಿಜಾಬ್​ ಧರಿಸಿ ಲೇಡೀಸ್​ ಸೀಟ್​ನಲ್ಲಿ ಬಂದು ಕುಳಿತಿದ್ದಾನೆ.


ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಂಡು, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಸ್​​​​ನಲ್ಲಿ ಪ್ರಯಾಣಿಸುತ್ತಿದ್ದ ಈತನ ಬಗ್ಗೆ ಕಂಡಕ್ಟರ್ ಗೆ ಅನುಮಾನ ಬಂದಿತ್ತು.

ಕಂಡಕ್ಟರ್ ಮಾಸ್ಕ್​ ತೆಗೆಯಲು ಹೇಳಿದರೂ ಯುವಕ ಅದನ್ನು ಆರಂಭದಲ್ಲಿ ವಿರೋಧಿಸಿದ್ದ. ನಂತರ ಕಂಡಕ್ಟರ್​ ಬಲವಂತ ಮಾಡಿದಾಗ ನಿಜ ಬಣ್ಣ ಬಯಲಾಗಿದೆ. ಒಳಗೆ ಗಡ್ಡ-ಮೀಸೆ ಇರುವ ಯುವಕ ಕಾಣಿಸಿದ್ದಾನೆ. ಗಡ್ಡ-ಮೀಸೆ ಇದ್ದರೂ ಯುವಕ ಮಹಿಳೆಯ ದನಿಯಲ್ಲಿಯೇ ಮಾತನಾಡಲು ಯತ್ನಿಸಿದ್ದಾನೆ. ಕೊನೆಗೆ ಹಿಜಾಬ್​ ಅನ್ನೂ ತೆಗೆಸಿದ ಕಂಡಕ್ಟರ್​ ಇದರ ವಿಡಿಯೋ ಕೂಡ ಮಾಡಿದ್ದಾರೆ.

ಮೊದಲು ಹಿಜಾಬ್​, ಮಾಸ್ಕ್​ ತೆಗೆಸುತ್ತಿರುವುದನ್ನು ಕಂಡ ಇತರ ಪ್ರಯಾಣಿಕರು ಕಂಡಕ್ಟರ್​ ಮೇಲೆಯೇ ಹರಿಹಾಯ್ದಿದ್ದರು. ಹುಡುಗಿಯ ಬಳಿ ಈ ರೀತಿ ವರ್ತಿಸುವುದು ಸರಿಯಲ್ಲ ಎಂದಿದ್ದರು. ಕೊನೆಗೆ ಅವರೂ ಬೆಚ್ಚಿಬಿದ್ದಿದ್ದಾರೆ.

ಉಚಿತವಾಗಿ ಪ್ರಯಾಣಿಸುವ ಸಲುವಾಗ ಯುವಕ ಈ ವೇಷ ಕಟ್ಟಿದ್ದ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99