ಬರ್ತ್ ಡೇಯಂದೇ ಬೈಕ್ನಲ್ಲಿ ಸಂಚರಿಸುತ್ತಿದ್ದ ಯುವಕನ ತಲೆ ಮೇಲೆ ಮರ ಬಿದ್ದು ದುರ್ಮರಣ...!
Tuesday, March 29, 2022
ಮೈಸೂರು: ಮನೆಮಗನ ಬರ್ತ್ ಡೇ ಸಂಭ್ರಮದಲ್ಲಿದ್ದ ಮನೆಯೊಂದರಲ್ಲಿ ಸಾವಿನ ಸೂತಕ ಆವರಿಸಿದೆ. ದುರಾದೃಷ್ಟಕರವೆಂದರೆ ಜನ್ಮದಿನದ ಸಂಭ್ರಮದಲ್ಲಿದ್ದ ಯುವಕನೇ ತನ್ನ ಹುಟ್ಟಿದ ದಿನವೇ ಮೃತಪಟ್ಟಿದ್ದಾನೆ.
ಮೈಸೂರಿನ ತಿ. ನರಸೀಪುರ ತಾಲೂಕಿನಲ್ಲಿ ಇಂಥದ್ದೊಂದು ದುರ್ಘಟನೆಯೊಂದು ಸಂಭವಿಸಿದೆ.
ಮೂಗೂರು ನಿವಾಸಿ ಮನು (28) ಬರ್ತ್ ಡೇಯಂದೇ ಮೃತಪಟ್ಟ ಯುವಕ.
ಮನು ತನ್ನ ಹುಟ್ಟುಹಬ್ಬದ ಪ್ರಯುಕ್ತ ತಮ್ಮನ ಮನೆಗೆ ಸಿಹಿ ವಿತರಿಸಲು ಬೈಕ್ ನಲ್ಲಿ ಸಂಚರಿಸುತ್ತಿದ್ದ. ತಿ.ನರಸೀಪುರ ತಾಲೂಕಿನ ಹಳೇ ಕೆಂಪಯ್ಯನ ಹುಂಡಿ ಬಳಿ ಹೋಗುತ್ತಿದ್ದ ಮನು ತಲೆ ಮೇಲೆ ಮರವೊಂದು ಮುರಿದು ಬಿದ್ದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಮನು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಿ. ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ತಿ. ನರಸೀಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೃಷ್ಣಪ್ಪ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.