ಉಡುಪಿಯಲ್ಲಿ ಲಾರಿ ಢಿಕ್ಕಿ ಹೊಡೆದ್ರೂ ಪಾರಾದ ಮಹಿಳೆ- CCTV VIDEO
Tuesday, March 8, 2022
ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ನಡೆದ ಅಪಘಾತದಲ್ಲಿ ದ್ವಿಚಕ್ರದಲ್ಲಿ ಇದ್ದ ಮಹಿಳೆ ಅಪಘಾತದ ತೀವ್ರತೆ ರಸ್ತೆಗೆ ಎಸೆಯಲ್ಪರೂ ಚಿಕ್ಕಪುಟ್ಟ ಗಾಯಗಳೊಂದಿಗೆ ಪಾರದ ಘಟನೆ ಉಡುಪಿ ಜಿಲ್ಲೆಯ ಪೆರಂಪಳ್ಳಿ ಎಂಬಲ್ಲಿ ನಡೆದಿದೆ.
ಪೆರಂಪಳ್ಳಿ - ಮಣಿಪಾಲ ಮುಖ್ಯ ರಸ್ತೆಯಲ್ಲಿ ಸ್ಕೂಟರ್ ನಲ್ಲಿ ರಸ್ತೆ ದಾಟುತಿದ್ದ ಮಹಿಳೆಗೆ ವೇಗವಾಗಿ ಬಂದ ಹಾಲಿನ ಟೆಂಪೋ ಢಿಕ್ಕಿ ಹೊಡೆದಿದ್ದು, ಢಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದರೈ, ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಹಾಲಿನ ವಾಹನ ಬರುತ್ತಿರುವುದನ್ನು ಗಮನಿಸದೇ ರಸ್ತೆ ದಾಟಲು ಪ್ರಯತ್ನಿಸಿದ್ದೇ ಘಟನೆ ಕಾರಣ ಎನ್ನಲಾಗಿದ್ದು, ತಕ್ಷಣವೇ ಸ್ಥಳದಲ್ಲಿದ್ದ ಬಸ್ ಸಿಬ್ಬಂದಿ, ಸಾರ್ವಜನಿಕರಿಂದ ಮಹಿಳೆಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅಪಘಾತ ನೋಡಿದ ಜನ ಮಹಿಳೆಯ ಆಯಸ್ಸು ಗಟ್ಟಿ ಇತ್ತು ಅಂತ ಅಚ್ಚರಿ ವ್ಯಕ್ತಪಡಿಸಿದರು.