
ಮಂಗಳೂರು: ನಡುರಸ್ತೆಯಲ್ಲಿಯೇ ಧಗಧಗನೇ ಹೊತ್ತಿ ಉರಿದ ಯುವತಿ ಚಲಾಯಿಸಿಕೊಂಡಿದ್ದ ಕಾರು!
Wednesday, March 30, 2022
ಮಂಗಳೂರು: ಯುವತಿಯೋರ್ವಳು ಚಲಾಯಿಸಿಕೊಂಡು ಬಂದಿದ್ದ ಕಾರೊಂದು ಪಾರ್ಕಿಂಗ್ ಮಾಡಿದ್ದ ಸ್ಥಳದಯಲ್ಲಿಯೇ ಏಕಾಏಕಿ ಧಗಧಗನೇ ಹೊತ್ತಿ ಉರಿದ ಘಟನೆಯೊಂದು ನಿನ್ನೆ ರಾತ್ರಿ ಶಕ್ತಿನಗರದ ಬಳಿ ನಡೆದಿದೆ.
ಶಕ್ತಿನಗರದ ಬಳಿ ಪಾರ್ಕಿಂಗ್ ಮಾಡಿ ಮೊಬೈಲ್ ಚಾರ್ಜ್ ಗೆ ಇಟ್ಟು ಯುವತಿ ವಾಯು ವಿಹಾರಕ್ಕೆ ತೆರಳಿದ್ದರು. ಆಕೆ ಬರುವಷ್ಟರಲ್ಲಿ ಮೊಬೈಲ್ ಚಾರ್ಜ್ ಗೆ ಇಟ್ಟ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಆಕೆ ಸ್ಥಳೀಯರಿಗೆ ತಿಳಿಸಿದ್ದಾಳೆ. ಆದರೆ ಅಷ್ಟರಲ್ಲಾಗಲೇ ಬೆಂಕಿಯ ಕೆನ್ನಾಲಿಗೆ ಇಡೀ ಕಾರನ್ನು ಆವರಿಸಿದೆ.
ಪರಿಣಾಮ ಪಾರ್ಕಿಂಗ್ ಗೆ ಇಟ್ಟ ಸ್ಥಳದಲ್ಲಿಯೇ ಎಲ್ಲರೂ ನೋಡನೋಡುತ್ತಿದ್ದಂತೆ ಕಾರು ಧಗಧಗನೇ ಹೊತ್ತಿ ಉರಿದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳ ದೌಢಾಯಿಸಿದೆ ಆದರೆ ಅಷ್ಟರಲ್ಲಾಗಲೇ ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ. ಕಾರು ಹೊತ್ತಿ ಉರಿಯುತ್ತಿರುವ ದೃಶ್ಯವನ್ನು ಅಲ್ಲಿದ್ದವರು ವೀಡಿಯೋ ಚಿತ್ರೀಕರಿಸಿದ್ದು, ಈ ವೀಡಿಯೋ ವೈರಲ್ ಆಗಿದೆ.