ಸಂಪ್ ನೊಳಗೆ ಪತ್ತೆಯಾಯಿತು ತಾಯಿ - ಮಗುವಿನ ಮೃತದೇಹ!
Friday, March 25, 2022
ಚಿಕ್ಕಬಳ್ಳಾಪುರ: ಮನೆಯಿಂದ ನಾಪತ್ತೆಯಾಗಿದ್ದ ತಾಯಿ - ಮಗು ಇಂದು ತೋಟದಲ್ಲಿನ ಸಂಪಿನಲ್ಲಿ ಮೃತದೇಹವಾಗಿ ಪತ್ತೆ ಆಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹರಳಹಳ್ಳಿ ಗ್ರಾಮದ ನವಲತಾ (26) ಹಾಗೂ ಪುತ್ರ ಅಂಜನ್ಕುಮಾರ್ (5) ಮೃತಪಟ್ಟವರು.
ನವಲತಾ ಹಾಗೂ ಅಂಜನ್ ಕುಮಾರ್ ನಿನ್ನೆ ಸಂಜೆ ಮನೆಯಿಂದ ತೋಟದ ಕಡೆಗೆ ಹೋಗಿದ್ದವರು ಮರಳಿ ಬಂದಿರಲಿಲ್ಲ. ಹೀಗಾಗಿ ತೋಟಕ್ಕೆ ಹೋಗಿ ಹುಡುಕಾಡಿದಾಗ ಅಲ್ಲಿನ ಸಂಪ್ನಲ್ಲಿ ತಾಯಿ-ಮಗನ ಮೃತದೇಹ ಪತ್ತೆಯಾಗಿವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನವಲತಾ ಪೋಷಕರು ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿದ್ದಾರೆ. ನವಲತಾ ಪತಿ ಸೊಣ್ಣೇ ಗೌಡ, ಆತನ ತಂದೆ ರಾಮಣ್ಣ, ತಾಯಿ ಪಿಳ್ಳಮ್ಮ, ಸೋದರರಾದ ಮುರಳಿ, ಚಂದ್ರು, ಗಾಯತ್ರಿ ಅವರ ಕಿರುಕುಳವೇ ಈ ಸಾವಿಗೆ ಕಾರಣ ಎಂದು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.