ಮುಸಲ್ಮಾನ ಸಮಾಜ ನಡೆದುಕೊಂಡ ರೀತಿ ಎಲ್ಲದಕ್ಕೂ ಕಾರಣ ; BJP ಶಾಸಕ ರಘಪತಿ ಭಟ್
Thursday, March 31, 2022
ರಾಜ್ಯದಲ್ಲಿ ಮುಸ್ಲಿಂ ವ್ಯಾಪಾರ ನಿರ್ಬಂಧ, ಹಲಾಲ್, ವಿಚಾರ ಚರ್ಚೆಯಾಗುತ್ತಿದೆ ನಮ್ಮ ಕಾಲೇಜಿನ ಆರು ವಿದ್ಯಾರ್ಥಿಗಳಿಗೆ ಸಾರಿ ಸಾರಿ ಹೇಳಿದರೂ ಅವರು ಕೇಳಲಿಲ್ಲ ಮುಸಲ್ಮಾನ ಸಮಾಜ ನಡೆದುಕೊಂಡ ರೀತಿ, ಬಂದ್ ಕರೆ ಇದಕ್ಕೆ ಕಾರಣ
ಅಂತ ಶಾಸಕ ರಘಪತಿ ಭಟ್ ಹೇಳಿದರು.
ಉಡುಪಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಭಟ್ಕಳದಲ್ಲಿ ಹಿಂದೂಗಳ ಅಂಗಡಿಯನ್ನು ಜಬರ್ದಸ್ತ್ ಯಾಗಿ ಬಂದ್ ಮಾಡಿಸಲಾಯ್ತು. ಎಲ್ಲಾ ಘಟನೆಗಳು ಹಿಂದೂಗಳ ಭಾವನೆಯನ್ನು ಕೆರಳಿಸಿವೆ. ಹಿಂದೂ ಗಳು ವ್ಯಾಪಾರ, ಹಲಾಲ್ ಮತ್ತಿತರ ವಿಚಾರವನ್ನು ಚರ್ಚೆಗೆ ತಂದರು 2002ರ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಕಾನೂನನ್ನು ಜಾರಿಗೆ ತರಲು ಒತ್ತಾಯಿಸಿದರು.
ಎರಡು ಸಮಾಜ ಒಟ್ಟಾಗಿ ಸೌಹಾರ್ದತೆಯಿಂದ ಹೋಗಬೇಕಾದ ಅವಶ್ಯಕತೆ ಇದೆ
ಮುಸಲ್ಮಾನ ಸಮಾಜ ಹಿಜಾಬ್ ವಿಚಾರವನ್ನು ಮೊದಲು ಕ್ಲಿಯರ್ ಮಾಡಿಕೊಳ್ಳಬೇಕು ನಾವೀಗ 21ನೇ ಶತಮಾನದಲ್ಲಿದ್ದೇವೆ ಈಗಲೂ ಧರ್ಮವೇ ಮುಖ್ಯ ಎಂದು ಪಟ್ಟು ಹಿಡಿದಿದ್ದಾರೆ. ಯಾವುದೇ ಹೊಂದಾಣಿಕೆ ಮಾಡಿಕೊಳ್ಳಲು ಆಗದಿದ್ದಾಗ ಹಿಂದೂಗಳು ಕೂಡ ತಮಗೆ ಧರ್ಮ-ಧರ್ಮ ಮುಖ್ಯ ಎಂದು ಅಭಿಪ್ರಾಯಕ್ಕೆ ಬಂದಿದ್ದಾರೆ ಅಂತ ರಘಪತಿ ಭಟ್ ಹೇಳಿದ್ದಾರೆ..
ಹಲಾಲ್ ಚಿಕನ್ ಅನ್ನು ಹಿಂದೂಗಳು ಬಾಯ್ಕಾಟ ಮಾಡಿದ್ದು ತಪ್ಪಲ್ಲ. ಹಿಂದೂಗಳ ಈ ನಡೆಯಲ್ಲಿ ಯಾವುದೇ ತಪ್ಪಿಲ್ಲ. ಹಲಾಲ್ ಅಂಗಡಿಯನ್ನ ಬಂದ್ ಮಾಡಿ ಎಂದು ಹಿಂದುಗಳು ಒತ್ತಾಯ ಮಾಡಿಲ್ಲ
ಹಲಾಲ್ ಮಾಂಸ ತಿನ್ನಬೇಡಿ ಎಂಬ ಕರೆ ಸರಿಯಾಗಿದೆ.
ಹಿಂದೂ ಜನಜಾಗೃತಿ ಮಾಡಿಸುವುದು ತಪ್ಪಲ್ಲ ಸರಿಯಾಗಿಯೇ ಅಂತ ಶಾಸಕರು ಅಭಿಪ್ರಾಯಪಟ್ಟರು.
.