ನನಗೆ 'ಬೀಫ್ ಸುಕ್ಕ'ನೇ ಬೇಕು ಎಂದು ಹಠ ಹಿಡಿದ ಗ್ರಾಹಕ ಮಾಡಿದ್ದೇನು
Sunday, March 27, 2022
ಇಡುಕ್ಕಿ: ಬೀಫ್ ಸುಕ್ಕ ಬೇಕೆಂದು ಹಠ ಹಿಡಿದ ಗ್ರಾಹನೋರ್ವ, ಅದು ಖಾಲಿಯಾಗಿದೆ ಎಂದು ತಿಳಿದಾಗ ಹೋಟೆಲ್ ನಲ್ಲಿ ರಾದ್ದಾಂತ ಮಾಡಿ, ಬಂದೂಕಿನಿಂದ ಗುಂಡು ಹಾರಿಸಿ ಓರ್ವನ ಬಲಿ ಪಡೆದುಕೊಂಡ ಘಟನೆ ಇಲ್ಲಿನ ಮೂಲಮುಟ್ಟಂ ಬಳಿಯ 'ತಟ್ಟುಕಡ' (ರಸ್ತೆ ಬದಿಯ ಸಣ್ಣ ಹೊಟೇಲ್)ನಲ್ಲಿ ನಡೆದಿದೆ.
ನಿನ್ನೆ ರಾತ್ರಿ ಹೊಟೆಲ್ ಗೆ ಬಂದಿದ್ದ ಇಬ್ಬರು ಗ್ರಹಕರ ಪೈಕಿ ಓರ್ವ ಬೀಫ್ ಬೇಕು ಎಂದು ಕೇಳಿದ್ದರು. ಆದರೆ ಶನಿವಾರವಾಗಿರುವುದರಿಂದ ಗ್ರಾಹಕರು ಹೆಚ್ಚು ಬಂದಿದ್ದು, ಬೀಫ್ ಖಾಲಿಯಾಗಿದೆ ಎಂದು ಹೊಟೇಲ್ ಮಾಲಕಿ ಸೌಮ್ಯ ಗ್ರಾಹಕರ ಬಳಿ ಹೇಳಿದ್ದಳು.
ಕುಡಿದ ಮತ್ತಿನಲ್ಲಿದ್ದ ಆತ ನನಗೇ ಬೀಫೇ ಬೇಕೆಂದು ಹಠ ಹಿಡಿದು ಹೊಟೇಲ್ ನಲ್ಲಿ ಗಲಾಟೆ ಮಾಡಿದ್ದಾರೆ. ಈ ವೇಳೆ ಹೊಟೇಲ್‌ನಲ್ಲಿದ್ದ ಇತರ ಗ್ರಾಹಕರು ಮತ್ತು ಸ್ಥಳೀಯರು ಆತನನ್ನು ಹೊಟೇಲ್‌ನಿಂದ ಕಳುಹಿಸಿದ್ದರು.
ಬಳಿಕ ಬೈಕ್‌ನಲ್ಲಿ ಬಂದು ಒಂದೆರಡು ಬಾರಿ ಹೊಟೇಲ್ ಬಳಿ ಬಂದು ಆತ ಸುತ್ತು ಹಾಕಿದ್ದು, ಬಳಿಕ ಕಾರಿನಲ್ಲಿ ಹೊಟೇಲ್ ಬಳಿ ಬಂದು, ಹೊಟೇಲ್ ಮುಂಭಾಗ ತನ್ನ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ಈ ವೇಳೆ ಅಲ್ಲಿದ್ದ ಇಬ್ಬರಿಗೆ ಗುಂಡು ತಾಗಿದ್ದು ಓರ್ವ ಮೃತಪಟ್ಟಿದ್ದು, ಮತ್ತೋರ್ವನಿಗೆ ಗಂಭೀರ ಗಾಯಗಳಾಗಿವೆ.
ಮೃತನನ್ನು ಆ ರಸ್ತೆಯಾಗಿ ತೆರಳುತ್ತಿದ್ದ ಸನಲ್ ಎಂದು ಗುರುತಿಸಲಾಗಿದ್ದು, ಆತನ ಜೊತೆಗಿದ್ದ ಪ್ರದೀಪ್ ಗಂಭೀರ ಗಾಯಗೊಂಡಿದ್ದಾನೆ. ಪ್ರದೀಪ್ ಮತ್ತು ಸನಲ್‌ಗೆ ಈ ಘರ್ಷಣೆ ಸಂಬಂಧ ಯಾವುದೇ ಭಾಗಿ ಇರಲಿಲ್ಲ.
ಸದ್ಯ ಪೊಲೀಸರು ಈ ಘಟನೆ ಕುರಿತಂತೆ ಆರೋಪಿ ಫಿಲಿಪ್ ಮಾರ್ಟಿನನ್ನು ಪೊಲೀಸರು ಬಂಧಿಸಿದ್ದಾರೆ.