ಅಮೇರಿಕಾದ ಅಪ್ಪ, ಜರ್ಮನಿಯ ಅಮ್ಮ ಸೇರಿಕೊಂಡು ಪುತ್ರನಿಗೆ ಉಡುಪಿ ಕೃಷ್ಣನ ಸನ್ನಿಧಾನದಲ್ಲಿ ಮಾಡಿದ್ರು ಅನ್ನಪ್ರಾಶನ ಶಾಸ್ತ್ರ !
Tuesday, March 8, 2022
ಅಮೇರಿಕಾ ಮೂಲದ ದೃಢವ್ರತ ಹಾಗೂ ಜರ್ಮನಿ ಮೂಲದ ಗಂಧರ್ವಿಕಾ ದಂಪತಿ ಪುತ್ರ ದೇವೇಶನಿಗೆ ಉಡುಪಿ ಕೃಷ್ಣ ಮಠದಲ್ಲಿ ಅನ್ನಪ್ರಾಶನ ಶಾಸ್ತ್ರ ನೆರವೇರಿಸಿದರು.
ಅಮೇರಿಕಾದ ದೃಢವ್ರತ 15 ವರ್ಷದವರಿದ್ದಾಗಲೇ ಚಿತ್ರ ಕಲಾವಿದರಾಗಿ ತಮಿಳುನಾಡಿನ ಮಹಾಬಲಿಪುರಂಗೆ ಬಂದು ಚಿತ್ರಕಲೆ ಶಿಲ್ಪಶಾಸ್ತ್ರವನ್ನು ಓದಿದ್ದರು. ಗಂಧರ್ವಿಕಾ ಮನಃಶಾಸ್ತ್ರ ಪದವಿಯನ್ನು ಮದ್ರಾಸ್ ವಿವಿ ಯಿಂದ ಪಡೆದಿದ್ದಾರೆ. ದಂಪತಿಗೆ ಭಾರತದ ಸಂಸ್ಕೃತಿ, ಹಿಂದೂ ಧರ್ಮದ ಬಗ್ಗೆ ಅಪಾರ ಒಲವು ಇದ್ದು, ಉತ್ತರ ಪ್ರದೇಶ ರಾಜ್ಯದ ವೃಂದಾವನದ ಶ್ರೀ ಸತ್ಯನಾರಾಯಣ ಬಾಬಾಜಿಯವರ ಶಾಸ್ತ್ರೋಕ್ತವಾಗಿ ಸಂಸ್ಕಾರ ಮಾಡಲು ತಿಳಿಸಿದಂತೆ, ಕೃಷ್ಣ ಮಠದಲ್ಲಿ ಅನ್ನಪ್ರಾಶನ ನಡೆಸಿದರು.
ಶ್ರೀ ಕೃಷ್ಣ ಮಠದಲ್ಲಿ ಮಗುವಿಗೆ ಅನ್ನಪ್ರಾಶನ ಸೇವೆ ನಡೆಸಿದ ದಂಪತಿ ಬಳಿಕ ಪರ್ಯಾಯ ಕೃಷ್ಣಾಪುರ ಶ್ರೀಗಳಿಂದ ಪ್ರಸಾದ ಸ್ವೀಕರಿಸಿದರು. ವಿದೇಶಿ ದಂಪತಿ ಕೆಲ ಕಾಲ ಉಡುಪಿಯಲ್ಲೇ ಇರುವ ನೆಲೆಸುವ ಇರಾದೆ ಹೊಂದಿದ್ದಾರೆ.