-->

ವೈರಲ್ ಆಯ್ತು 'ಆಧಾರ್ ಕಾರ್ಡ್' ಮದುವೆ ಆಮಂತ್ರಣ ಪತ್ರಿಕೆ: ಮದುವೆ ಜೋಡಿಯಿಂದ 'ಆಧಾರ್' ಜಾಗೃತಿ

ವೈರಲ್ ಆಯ್ತು 'ಆಧಾರ್ ಕಾರ್ಡ್' ಮದುವೆ ಆಮಂತ್ರಣ ಪತ್ರಿಕೆ: ಮದುವೆ ಜೋಡಿಯಿಂದ 'ಆಧಾರ್' ಜಾಗೃತಿ

ಬೆಳಗಾವಿ: ದೇಶಾದ್ಯಂತ ಇದೀಗ ಎಲ್ಲಾ ದಾಖಲೆಗಳಿಗೆ ಆಧಾರ್ ಕಡ್ಡಾಯವಾಗಿದೆ‌. ಈ ಆಧಾರ್ ಕಾರ್ಡನ್ನು ಪ್ರತಿಯೊಬ್ಬರೂ ದಿನನಿತ್ಯ ಅನೇಕ ಸೌಲಭ್ಯಗಳಿಗಾಗಿ ಬಳಸುತ್ತಲೇ ಇರುತ್ತಾರೆ. ಆದರೆ ಇಲ್ಲೊಂದು ಜೋಡಿ ಮದುವೆಯ ಆಮಂತ್ರಣ ಪತ್ರಿಕೆಯನ್ನೇ ಆಧಾರ್ ಕಾರ್ಡ್ ಮಾದರಿಯಲ್ಲಿ ಮುದ್ರಣ ಮಾಡಿಸಿದೆ. 

ಆಧಾರ್ ನೋಂದಣಿ ಕುರಿತು ಜಾಗೃತಿ ಮೂಡಿಸಲು ಯುಡಿಐ ಆಯೋಗ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಬೆಳಗಾವಿಯ ಜೋಡಿ ತಮ್ಮ ಮದುವೆಯ ಮೂಲಕ ಆಧಾರ್ ಕಾರ್ಡ್ ನೋಂದಣಿ ಮಾಡಿಸುವ ಜಾಗೃತಿ ಮೂಡಿಸಿದೆ.  ಅದಕ್ಕಾಗಿ ವಿಭಿನ್ನ ಮಾದರಿಯಲ್ಲಿ ಮದುವೆಯ ಆಮಂತ್ರಣ ಪತ್ರಿಕೆಯನ್ನೇ ಆಧಾರ್ ಕಾರ್ಡ್ ನಂತೆ ವಿನ್ಯಾಸ ಮಾಡಿಇಸಿದೆ. 

ಎರಡು ಜೋಡಿ ಎ.21ರಂದು ಮದುವೆ ಆಗಲಿದೆ. ಈಶ್ವರಯ್ಯ - ಕಾವೇರಿ ಹಾಗೂ ಬಸಯ್ಯ - ಪವಿತ್ರಾ ಜೋಡಿಯು ಎ.21ರಂದು ಹಸೆಮಣೆ ಏರಲಿದೆ. ತಮ್ಮ ವಿವಾಹ ಆಮಂತ್ರಣ ಪತ್ರಿಕೆಯ ಮೂಲಕ ಆಧಾರ್ ಕಾರ್ಡ್ ಮಾಡಿಸುವುದರಿಂದ ಆಗುವ ಉಪಯೋಗಗಳನ್ನು ತಿಳಿಸುವ ಪ್ರಯತ್ನ ಮಾಡಿದೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಗರನಾಳ ಗ್ರಾಮದಲ್ಲಿ ಈ ಮದುವೆ ನಡೆಯಲಿದೆ. ಇದಕ್ಕೆ ವಿಭಿನ್ನವಾಗಿ ಆಹ್ವಾನ ನೀಡಿದ್ದಾರೆ.

ಆಹ್ವಾನ ಪತ್ರಿಕೆ ಹೀಗಿದೆ... ಆಧಾರ್ ಕಾರ್ಡ್ ಮಾದರಿಯ ಆಮಂತ್ರಣ ಪತ್ರಿಕೆಯಲ್ಲಿ ಭಾರತ ಸರ್ಕಾರದ ಹೆಸರಿನ ಬದಲಿಗೆ 'ಮದುವೆಯ ಮಮತೆಯ ಕರೆಯೋಲೆ' ಎಂದು ಬರೆಯಲಾಗಿದೆ. ಆಧಾರ್ ಕಾರ್ಡ್ ನಂಬರ್ ಜಾಗದಲ್ಲಿ ಮೊಬೈಲ್ ನಂಬರ್ ಬರೆಯಲಾಗಿದೆ. ಆಧಾರ್ ನೋಂದಣಿದಾರರ ಹೆಸರು ಬರುವ ಸ್ಥಳದಲ್ಲಿ ದಂಪತಿಗಳ ಹೆಸರು ಎಂದು ಹಾಕಿ ಚಿ.ಬಸಯ್ಯ ಮತ್ತು ಚಿ.ಕು.ಸೌ.ಪವಿತ್ರಾ ಮತ್ತು ಚಿ.ಈಶ್ವರಯ್ಯ ಮತ್ತು ಚಿ.ಕು.ಸೌ.ಕಾವೇರಿ ಎಂದು ಮುದ್ರಿಸಿದ್ದಾರೆ. ಜನ್ಮ ದಿನಾಂಕದ ಬದಲಿಗೆ ಮದುವೆ ದಿನಾಂಕ ಎಂದು ಹಾಕಿದ್ದಾರೆ. 21-04-2022, ಜೊತೆಗೆ ಧಾರೆ ಮೂಹುರ್ತವನ್ನು ಸಮಯ ಮಧ್ಯಾಹ್ನ 12.28 ಎಂದು ನಮೂದಿಸಿದ್ದಾರೆ.‌ ನಂತರದಲ್ಲಿ ಮದುವೆ ನಡೆಯುವ ಸ್ಥಳ ಹಾಗೂ ಕುಟುಂಬದ ಹೆಸರು ಮತ್ತು ತಮ್ಮ ಆಗಮನಾಭಿಲಾಷಿಗಳು ಎಂದು ನಮೂದಿಸಿದ್ದಾರೆ. ಮದುವೆಗೆ ಎಲ್ಲರಿಗೂ ಆಹ್ವಾನವನ್ನು ನೀಡಿದ್ದಾರೆ. 

ಇದಲ್ಲದೇ ಆಧಾರ್ ನೋಂದಣಿ ಮಾಡಿಸಲು ಈ ಜೋಡಿ ಕರೆ ನೀಡಿದ್ದು, ಆಧಾರ್ ಕಾರ್ಡ್ ನಿಂದಾಗುವ ಉಪಯೋಗಗಳ ಬಗ್ಗೆ ತಿಳಿಸಿದ್ದಾರೆ. ‌ʼಮದುವೆಗೆ ತಪ್ಪದೇ ಬನ್ನಿ, ತಪ್ಪದೆ ಆಧಾರ್ ನೋಂದಣಿ ಮಾಡಿಸಿ‌ʼ ಎಂದು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99