
ಕಾರ್ಕಳ ಉತ್ಸವ- 5 ಮಂದಿ ಪೌರ ಕಾರ್ಮಿಕರೊಂದಿಗೆ ಸಚಿವ ಸುನಿಲ್ ಹೆಲಿಕಾಪ್ಟರ್ ರೈಡ್!
ಉಡುಪಿ;ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಅದ್ದೂರಿ ಕಾರ್ಕಳ ಉತ್ಸವ-2022 ನಡೆಯುತ್ತಿದೆ.
ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಸಾರಥ್ಯದಲ್ಲಿ ಉತ್ಸವ ನಡೆಯಲಿದೆ. ಉದ್ಘಾಟನೆ ಅಂಗವಾಗಿ ಸಚಿವ ಸುನಿಲ್ ಕುಮಾರ್ ಸ್ವರಾಜ್ ಮೈದಾನದಲ್ಲಿ ಪೌರ ಕಾರ್ಮಿಕರ ಜೊತೆ ಹೆಲಿಕಾಪ್ಟರ್ ನಲ್ಲಿ ಜಾಲಿ ರೈಡ್ ಮಾಡಿದರು.
ಉತ್ಸವದ ಅಂಗವಾಗಿ ಹೆಲಿಕಾಫ್ಟರ್ ನಲ್ಲಿ ಜಾಲಿ ರೈಡ್ ಮಾಡಲು ಅವಕಾಶವಿದೆ. ಹೆಲಿಕಾಪ್ಟರ್ ನಲ್ಲಿ ಒಂದು ಸುತ್ತು ಪ್ರಯಾಣಿಸಲು ಹಲವರು ಬುಕ್ ಮಾಡಿದ್ದಾರೆ. ಈ ಮಧ್ಯೆ ಸಚಿವ ಸುನಿಲ್ ಕುಮಾರ್ ಕಾರ್ಕಳ ಉತ್ಸವಕ್ಕೆ ಸ್ಚಚ್ಛತಾ ಕಾರ್ಯ ನಡೆಸುತ್ತಿರುವ ಐವರು ಪೌರ ಕಾರ್ಮಿಕರ ಜೊತೆ ಹೆಲಿಕಾಪ್ಟರ್ ನಲ್ಲಿ ತಿರುಗಾಡಿಸಿ ಖುಷಿ ಪಟ್ಟರು. ಹತ್ತು ದಿನಗಳ ಕಾಲ ಉತ್ಸವ ನಡೆಯಲಿದ್ದು ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.