ಕ್ರೈಸ್ತರು ಎಕೆ47 ತೋರಿಸಿ ಮತಾಂತರ ಮಾಡೋಲ್ಲ, ಪ್ರೀತಿಯಿಂದ ಮತಾಂತರ ಮಾಡುತ್ತಾರೆ: ಮತಾಂತರವನ್ನು ಸಮರ್ಥಿಸಿದ ಎಸ್ ಡಿಪಿಐ ಮುಖಂಡ
Wednesday, March 30, 2022
ಮಂಗಳೂರು: ಎಸ್ ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸೊ ಫ್ರಾಂಕೊ ಅವರು ಎಸ್ ಡಿಪಿಐ ಪ್ರತಿಭಟನಾ ಸಭೆಯಲ್ಲಿ ಕ್ರೈಸ್ತರು ಪ್ರೀತಿಯಿಂದ ಮತಾಂತರ ಮಾಡುತ್ತಾರೆ. ಯಾರಲ್ಲಿ ಯಾವುದು ಇಲ್ಲವೋ ಅದನ್ನು ಪ್ರೀತಿಯಿಂದ ನೀಡಿ ಮತಾಂತರ ಮಾಡುತ್ತಾರೆಯೇ ಹೊರತು ಎಕೆ47 ತೋರಿಸಿ ಬೆದರಿಸಿ ಮತಾಂತರ ಮಾಡೋದಿಲ್ಲ ಎಂದು ಕ್ರೈಸ್ತರು ಮತಾಂತರ ಮಾಡುತ್ತಾರೆ ಎಂದು ಸಮರ್ಥಿಸಿದರು.
ಕ್ರೈಸ್ತರು ಎಲ್ಲರನ್ನೂ ಪ್ರೀತಿಯಿಂದ ಮತಾಂತರ ಮಾಡುತ್ತಾರೆ. ಅನ್ನ ಇಲ್ಲದವರಿಗೆ ಅನ್ನ ಕೊಟ್ಟು, ರಕ್ತ ಇಲ್ಲದವರಿಗೆ ರಕ್ತ ಕೊಟ್ಟು, ಮನೆ ಇಲ್ಲದವರಿಗೆ ಮನೆಯನ್ನು ಕೊಟ್ಟು, ಕಣ್ಣಿಲ್ಲದವರಿಗೆ ಅವರ ಸೇವೆ ಮಾಡುವ ಮೂಲಕ ಮತಾಂತರ ಮಾಡುತ್ತೇವೆ. ಪ್ರೀತಿಯನ್ನು ಕೊಟ್ಟು ಮತಾಂತರ ಮಾಡುವವರು ಕ್ರೈಸ್ತರು. ಬೆದರಿಸಿ, ಎ.ಕೆ.47 ತೋರಿಸಿ ಮತಾಂತರ ಮಾಡಬೇಕೆಂದಿಲ್ಲ. ಏಸುಕ್ರಿಸ್ತರು ಪ್ರೀತಿ, ಶಾಂತಿಯಿಂದ ಇದ್ದು, ಸತ್ಯವನ್ನು ಹೇಳಿ ಸಮಾಜವನ್ನು ಕಟ್ಟಿ ಎಂದರು. ನಾವು ಅದನ್ನೇ ಮಾಡುತ್ತಿದ್ದೇವೆ ಎಂದು ಅಲ್ಫಾನ್ಸೊ ಫ್ರಾಂಕೊರವರು ಹೇಳುವ ಮುಖಾಂತರ ಕ್ರೈಸ್ತರು ಮತಾಂತರ ಮಾಡುತ್ತಾರೆಂದು ಸಮರ್ಥನೆ ಮಾಡಿದರು.
ಈ ದೇಶ ನಮ್ಮದು, ನಾವೆಲ್ಲಾ ಹಿಂದೂಗಳೊಂದಿಗೆ ಬೆಳೆದವರು, ಹಿಂದೂಗಳೊಂದಿಗೆ ಕುಳಿತವರು, ಅವರ ಪ್ರೀತಿ ಗಳಿಸಿದವರು. ಆದರೆ ಬಜರಂಗದಳ, ಶ್ರೀರಾಮಸೇನೆಯಂತಹ ಕಚಡಾಗಳೊಂದಿಗೆ ಇದ್ದವರಲ್ಲ. ನಮ್ಮದು ಹಿಂದುತ್ವವಲ್ಲ ಆದರೆ ಹಿಂದೂ ಪ್ರೀತಿ ಪ್ರೇಮಗಳ ಮಿಲನದ ಸಂಕೇತ ನಾವು. ನಮ್ಮದು ಮನ್ ಕೀ ಬಾತ್ ಅಲ್ಲ. ದಿಲ್ ಕೀ ಬಾತ್ ಎಂದು ಅಲ್ಫಾನ್ಸೊ ಫ್ರಾಂಕೊ ಹೇಳಿದರು.