
ಪೇಜಾವರ ಸ್ವಾಮೀಜಿಗಳ ಸೈಕಲ್ ಸವಾರಿ- VIDEO
ಉಡುಪಿ: ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥರ ಸೈಕಲ್ ಸವಾರಿ ನೋಡಿ ಜನರು ಸಂತಸ ವ್ಯಕ್ತಪಡಿಸಿದರು.
ಉಡುಪಿಯ ಮಣಿಪಾಲದಲ್ಲಿ ನಡೆದ ಸೈಕಲ್ ಜಾಥಾದಲ್ಲಿ ಉದ್ಘಾಟಿಸಿದ ಶ್ರೀಗಳು ಖುದ್ದು ಸೈಕಲ್ ಸವಾರಿ ಮಾಡಿ ನೆರೆದ ಜನರನ್ನು ಚಕಿತಗೊಳಿಸಿದ್ದಾರೆ. ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿ, ವೈದ್ಯಕೀಯ ಪ್ರಕೋಷ್ಟ ಮತ್ತು ವಸಂತಿ ಎ. ಪೈ ಪ್ರತಿಷ್ಟಾನದ ವತಿಯಿಂದ ಸೈಕಲ್ ಜಾಥಾ ಆಯೋಜಿಸಲಾಗಿತ್ತು.
ಆರೋಗ್ಯಕ್ಕಾಗಿ ಸೈಕ್ಲಿಂಗ್ ಕ್ರಾಯಕ್ರಮದಲ್ಲಿ ಪಾಲ್ಗೊಂಡ ಶ್ರೀಗಳು ಸೈಕ್ಲಿಂಗ್ ಮೂಲಕ ಯುವಜನರನ್ನು ರೋಮಾಂಚನ ಮೂಡಿಸಿದರು.
ವೃತ್ತಿಪರ ಸೈಕ್ಲಿಸ್ಟ್ ಗಳನ್ನೂ ನಾಚಿಸಿದ ಸ್ವಾಮೀಜಿ, ಸುಮಾರು 300 ಮೀಟರ್ ಲೀಲಾಜಾಲವಾಗಿ ಸವಾರಿ ಮಾಡಿದರು. ಸದ್ಯ ಶ್ರೀಗಳ ಸೈಕಲ್ ಸವಾರಿ ಪೇಜಾವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಕ್ತರು ಖುಷಿ ವ್ಯಕ್ತಪಡಿಸಿದ್ದಾರೆ..