ಉಡುಪಿ ಹಿಜಾಬ್ ವಿವಾದ ; ಪ್ರಾಂಶುಪಾಲರ ಕುಟುಂಬಕ್ಕೆ ಕೊಲೆ ಬೆದರಿಕೆ
Monday, February 28, 2022
ಹಿಜಾಬ್ ಧರಿಸಿ ಕ್ಲಾಸ್‌ನಲ್ಲಿ ಪಾಠ ಕೇಳುದಕ್ಕೆ ಅವಕಾಶ ನೀಡದ ಉಡುಪಿಯ ಕುಂದಾಪುರದ ಆರ್‌ಎನ್ ಶೆಟ್ಟಿ ಕಾಲೇಜಿನ ಪ್ರಾಂಶುಪಾಲರ ಕುಟುಂಬಕ್ಕೆ ಇಂಟರ್ನೆಟ್ ಕಾಲ್ ಮೂಲಕ ಕೊಲೆ ಬೆದರಿಕೆ ಹಾಕಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೋಲಾರ ಕೆಜಿಎಫ್ ರಾಬರ್ಟ್ಸನ್ ಪೇಟೆ ನಿವಾಸಿ ಮೊಹಮ್ಮದ್ ಶಬೀರ್ ಬಂಧಿತ ಆರೋಪಿ.
ಆರ್‌ಆನ್ ಕಾಲೇಜಿನಲ್ಲಿ ಹಿಜಾಬ್ ಅವಕಾಶ ನೀಡಿರಲಿಲ್ಲ ಹೀಗಾಗಿ ಅವಕಾಶ ನೀಡದ ಪ್ರಾಂಶುಪಾಲರಿಗೆ ಇಂಟರ್ನೆಟ್ ಮೂಲಕ ಕರೆ ಮಾಡಿದ ಆರೋಪಿ ನಿನ್ನ ಹೆಂಡತಿ ಮಕ್ಕಳನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ. ಇಂಟರ್ನೆಟ್ ಕರೆಯ ಜಾಡು ಹಿಡಿದ ಕುಂದಾಪುರ ಪೊಲೀಸರು, ಕೋಲಾಕ್ಕೆ ಹೋಗಿ
ಕೋಲಾರ ಕೆಜಿಎಫ್ ರಾಬರ್ಟ್ಸನ್ ಪೇಟೆ ನಿವಾಸಿ ಮೊಹಮ್ಮದ್ ಶಬೀರ್ ಬಂಧಿಸಿ ಕರೆ ತಂದಿದ್ದಾರೆ..