ಕೋರ್ಟ್ ತೀರ್ಪುಗೆ ಅನುಗುಣವಾಗಿ ನಡೆಯೋಣ; ಪೇಜಾವರ ಶ್ರೀ ಕರೆ (Video)
Monday, February 14, 2022
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಹೀಗಾಗಿ ನಾಳಿನ ದಿನಗಳಲ್ಲಿ ಕಟ್ಟಿಕೊಳ್ಳುವ ಮಕ್ಕಳ ಬದುಕು ಮುಖ್ಯ ಮುಂದಿನ ಸಮಾಜ ಸುಶಿಕ್ಷಿತ ಸಮಾಜವಾಗಿ ಇರಬೇಕು. ಸಮಾಜದಲ್ಲಿ ಶಿಕ್ಷಣಕ್ಕೆ ಪೂರಕ ವಾತಾವರಣ ನಿರ್ಮಾಣವಾಗಲಿ ಅಂತ ಉಡುಪಿ ಪೇಜಾವರ ಮಠದ ಮಠಾಧೀಶ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀ ಹೇಳಿದರು.
ಉಡುಪಿಯಲ್ಲಿ ಆರಂಭವಾದ ಹಿಬಾಜ್ ಹಾಗೂ ಕೇಸರಿ ಸಂಘರ್ಷ ಕುರಿತು ಮಾತನಾಡಿದ ಶ್ರೀಗಳು, ದೊಂಬಿ ಗಾಲಾಟೆ ಹಾನಿಯಾಗಬೇಕೆಂಬ ಅಪೇಕ್ಷೆ ಯಾರಿಗೂ ಇಲ್ಲ ಎಲ್ಲರೂ ಶಾಂತಿಯನ್ನು ಕಾಪಾಡಬೇಕು ಪ್ರಕರಣದ ಕೋರ್ಟ್ ವಿಚಾರಣೆ ನಡೆಯುತ್ತಿದೆ ಏನು ತೀರ್ಪು ಬರುತ್ತದೆ ಕಾದು ನೋಡೋಣ ತೀರ್ಪಿಗೆ ಅನುಗುಣವಾಗಿ ಮುಂದೆ ನಡೆಯೋಣ ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀ ಹೇಳಿದರು.