![ಮುಸ್ಲಿಂ ವಿದ್ಯಾರ್ಥಿನಿಯರ ತಾಳಕ್ಕೆ ಕುಣಿಯಲು ಸಾಧ್ಯವಿಲ್ಲ- ಉಡುಪಿ PUC ವಿದ್ಯಾರ್ಥಿನಿ ( Video) ಮುಸ್ಲಿಂ ವಿದ್ಯಾರ್ಥಿನಿಯರ ತಾಳಕ್ಕೆ ಕುಣಿಯಲು ಸಾಧ್ಯವಿಲ್ಲ- ಉಡುಪಿ PUC ವಿದ್ಯಾರ್ಥಿನಿ ( Video)](https://blogger.googleusercontent.com/img/b/R29vZ2xl/AVvXsEiFREQMw4Upgjhyphenhyphena9QIe2VE3Hs-ekYp9ouTImDHxb4CDttl2_iM3seZnHH6jyUiuFbK2vmfnQCRvK4kszY3CWXMMT_zZ2DmoRGk8nc95ldlQtcQoPqSD7Ql8ubzNnprFrAtfomaYjDw9Z8/s1600/1644856690437860-0.png)
ಮುಸ್ಲಿಂ ವಿದ್ಯಾರ್ಥಿನಿಯರ ತಾಳಕ್ಕೆ ಕುಣಿಯಲು ಸಾಧ್ಯವಿಲ್ಲ- ಉಡುಪಿ PUC ವಿದ್ಯಾರ್ಥಿನಿ ( Video)
Monday, February 14, 2022
ಹಿಜಾಬ್ ವಿವಾದ ಆರಂಭವಾದ ಉಡುಪಿ ಪಿಯು ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಆದಷ್ಟು ಬೇಗ ತರಗತಿಗಳನ್ನು ಆರಂಭಿಸಿದ ಎಂದು ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದ್ದಾಳೆ.
ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ವಿದ್ಯಾರ್ಥಿನಿ, ಕೇವಲ ಆರು ಜನರಿಗೋಸ್ಕರ ನಾವು 900 ಜನ ಕಷ್ಟಪಡಲು ಸಾಧ್ಯವಿಲ್ಲ ಇವರ ತಾಳಕ್ಕೆ ಕುಣಿಯಲು ಸಾಧ್ಯವಿಲ್ಲ, ಆನ್ಲೈನ್ ತರಗತಿಗಳು ಅರ್ಥವಾಗುವುದಿಲ್ಲ. ತರಗತಿಯಲ್ಲಿ ಕುಳಿತು ಪಾಠ ಕೇಳಬೇಕು ಇವರು ಆರು ಜನರಿಗಾಗಿ ನಾವು ನಮ್ಮ ಭವಿಷ್ಯಹಾಳು ಮಾಡಿಕೊಳ್ಳಲು ಸಾಧ್ಯವಿಲ್ಲ ಅಂತ ವಿದ್ಯಾರ್ಥಿನಿ ಹೇಳಿದ್ದಾಳೆ.
ಇವರಲ್ಲಿ ಯಾರು ಕೂಡ ತರಗತಿಯಲ್ಲಿ ಹಿಜಾಬ್ ಹಾಕುತ್ತಿರಲಿಲ್ಲ. ಇದೇ ಕಾಲೇಜಿನಲ್ಲಿ ಐದು ವರ್ಷದಿಂದ ಕಲಿಯುತ್ತಿದ್ದೇನೆ ಯಾರು ಕೂಡ ಹಿಜಾಬ್ ಹಾಕಿಕೊಂಡು ಬರುತ್ತಿರಲಿಲ್ಲ ಇವರು ಡಿಸೆಂಬರ್ ನಿಂದ ಗದ್ದಲ ಆರಂಭಿಸಿದ್ದಾರೆ. ಇವರಿಗೆ ಫಸ್ಟ್ ಇಯರ್ ನಲ್ಲಿ ಕಾಲೇಜಿಗೆ ಸೇರುವಾಗ ಬುದ್ಧಿ ಇರಲಿಲ್ಲವಾ ಅಂತ ಸಹಪಾಠಿ ವಿದ್ಯಾರ್ಥಿನಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾಳೆ.
ಈಗ ಬಂದು ಹಿಜಾಬ್ ಬೇಕು ಎಂದು ಕೇಳುತ್ತಿದ್ದಾರೆ. ನಮ್ಮದು ಸಮವಸ್ತ್ರಕಾಗಿ ಹೋರಾಟ. ನಾವೇನೂ ಕೇಸರಿ ಶಾಲು ಹಾಕಿಕೊಂಡು ಕಾಲೇಜಿಗೆ ಬಂದಿಲ್ಲ ಅಂತ ವಿದ್ಯಾರ್ಥಿನಿ ತನ್ನ ಸಹಪಾಠಿ ವಿರುದ್ಧವೇ ವಾಗ್ದಾಳಿ ನಡೆಸಿದ್ದಾಳೆ.