
UDUPI : ನಮಗೆ ನಮ್ಮ ಧರ್ಮವೇ ಮುಖ್ಯ, ಹಿಜಾಬ್ ನಮ್ಮ ಹಕ್ಕು- ಮುಸ್ಲಿಂ ವಿದ್ಯಾರ್ಥಿನಿಯರು
Thursday, February 17, 2022
ಹಿಜಾಬ್ ಧರಿಸಿ ತರಗತಿಯಲ್ಲಿ ಪಾಠ ಕೇಳುದಕ್ಕೆ ಅವಕಾಶ ನೀಡಿ ಅಂತ ಉಡುಪಿಯ ಜಿ ಶಂಕರ್ ಪ್ರಥಮ ದರ್ಜೆ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದ್ದರು.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ವಿದ್ಯಾರ್ಥಿನಿಯರು, ಸರ್ಕಾರದ ಹೇಳಿಕೆಗಳಿಂದ ಗೊಂದಲವಾಗುತ್ತಿದೆ. ಸರ್ಕಾರದ ತನ್ನ ಹೇಳಿಕೆಯನ್ನು ರಿಟನ್‌ನಲ್ಲಿ ನೀಡಿದ್ರೆ ಯಾವುದೇ ಗೊಂದಲವಾಗುದಿಲ್ಲ ಅಂತ ಹೇಳಿದ್ದಾರೆ. ನಮಗೆ ಪ್ರಾಂಶುಪಾಲರು ಸದ್ಯಕ್ಕೆ ಆನ್ಲೈನ್ ಕ್ಲಾಸ್ ಮಾಡ್ತಿವಿ ಅಂದಿದ್ದಾರೆ.
ಆದರೆ ಪ್ರಾಕ್ಟಿಕಲ್ ತರಗತಿಗಳಿಗೆ ಇದರಿಂದ ತೊಂದರೆ ಆಗುತ್ತಿದೆ. ಮರು ಪರೀಕ್ಷೆ ಅವಕಾಶ ನೀಡುತ್ತೇವೆ ಅಂದಿದ್ದಾರೆ. ಆದ್ರೆ ಮರು ಪರೀಕ್ಷೆ ತುಂಬಾ ತಡವಾಗುತ್ತದೆ, ಇದರಿಂದ ತೊಂದರೆ ಉಂಟಾಗುತ್ತದೆ ಹೀಗಾಗಿ ಸರ್ಕಾರ ಆದಷ್ಟು ಬೇಗ ಸ್ವಷ್ಟ ತೀರ್ಮಾನಕ್ಕೆ ಬರಬೇಕು ಅಂತ ಒತ್ತಾಯಿಸಿದರು. ನಾವು ಮುಂದಿನ ಆದೇಶ ಬರುವವರೆಗೂ ಕಾಲೇಜ್ಗೆ ಬರುದಿಲ್ಲ, ಪರಿಕ್ಷೆಯನ್ನು ಹಿಜಾಬ್ ಧಿರಿಸಿಯೇ ಬರೆಯುತ್ತೇವೆ. ನಮಗೆ ನಮ್ಮ ಧರ್ಮವೇ ನಮಗೆ ಮುಖ್ಯ ಅಂತ ಹೇಳಿದ್ದಾರೆ..