ಮಂಗಳೂರಿನಲ್ಲಿ ATM ಕಳವಿಗೆ ಯತ್ನ- ರೆಡ್ ಹ್ಯಾಂಡ್ ಸೆರೆ ಹಿಡಿದ ಪೊಲೀಸರು!
Wednesday, February 9, 2022
( Gk) ಮಂಗಳೂರು; ಮಂಗಳೂರಿನ ತೊಕ್ಕೊಟ್ಟುವಿನಲ್ಲಿ ಎಟಿಎಂ ಕಳವಿಗೆ ಯತ್ನಿಸಿದ ಆರೋಪಿಯೊಬ್ಬನನ್ನು ಮಂಗಳೂರು ಪೊಲೀಸರು ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿದಿದ್ದಾರೆ.
( Gulf kannadiga) ಕೊಪ್ಪಳ ಜಿಲ್ಲೆಯ ಬಚ್ಚನಲ್ಲಿಯ ಬೀರಪ್ಪ ಎಂಬಾತ ಬ್ಯಾಂಕ್ ಎಟಿಎಂ ಕಳವಿಗೆ ಯತ್ನಿಸಿದವನು. ಈತ ನಿನ್ನೆ ರಾತ್ರಿ 2 ಗಂಟೆ ಸುಮಾರಿಗೆ ತೊಕ್ಕೊಟ್ಟುವಿನಲ್ಲಿರುವ ಬರೋಡ ಬ್ಯಾಂಕ್ ಎಟಿಎಂ ಕೇಂದ್ರ ಕ್ಕೆ ಹೋಗಿ ಎಟಿಎಂ ನಿಂದ ಹಣ ಕಳವಿಗೆ ಯತ್ನಿಸಿದ್ದಾನೆ.
(gulf kannadiga)ಈತ ಎಟಿಎಂ ನಲ್ಲಿ ಹಣ ಕಳವಿಗೆ ಯತ್ನಿಸುತ್ತಿರುವುದು ಸರ್ವಿಲೆನ್ಸ್ ಅಧಿಕಾರಿಗಳ ಗಮನಕ್ಕೆ ಬಂದಿದ್ದು ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಉಳ್ಳಾಲ ಪೊಲೀಸರು ಸ್ಥಳಕ್ಕೆ ತೆರಳಿ ಎಟಿಎಂಕಳವಿಗೆ ಯತ್ನಿಸುತ್ತಿದ್ದ ಬೀರಪ್ಪನನ್ನು ಬಂಧಿಸಿದ್ದಾರೆ.