ಮಂಗಳೂರಿನಲ್ಲಿಯೂ ತಿಮಿಂಗಿಲ ವಾಂತಿ ಮಾರಾಟ ಜಾಲ- ಇಲ್ಲಿ ಸಿಕ್ಕಿದ್ದು 3.48 ಕೋಟಿ ಮೌಲ್ಯದ ಅಂಬರ್ ಗ್ರೀಸ್!
ಮಂಗಳೂರು: ಮಂಗಳೂರಿನಲ್ಲಿಯೂ ತಿಮಿಂಗಿಲ ವಾಂತಿ ( ಅಂಬರ್ ಗ್ರೀಸ್)
ಯ ಮಾರಾಟ ಜಾಲ ವನ್ನು ಮಂಗಳೂರು ನಗರ ಪೊಲೀಸರು ಪತ್ತೆ ಹಚ್ಚಿದ್ದಾರೆ.
ತಮಿಳುನಾಡಿನ ಮೀನುಗಾರನೊಬ್ಬನಿಂದ ಖರೀದಿಸಿ ಕೋಟ್ಯಾಂತರ ರೂ ಮೌಲ್ಯದ
ತಿಮಿಂಗಿಲ ವಾಂತಿಯನ್ನು ಮಂಗಳೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಟ್ಬಾಳ ತಾಲೂಕಿನ ಬಾಳೆಪುಣಿ
ಗ್ರಾಮದ ನವೋದಯ ಶಾಲೆಯ ಬಳಿ ನಿಷೇಧಿತ ವಸ್ತುಆದ ತಿಮಿಂಗಿಲ ವಾಂತಿಯನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ
ವೇಳೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ 3 ಕೆ ಜಿ 480 ಗ್ರಾಂ ತಿಮಿಂಗಿಲ ವಾಂತಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ
ರೂ 3.48 ಕೋಟಿ ಎಂದು ಅಂದಾಜಿಸಲಾಗಿದೆ.
ಬಂಧಿತರು
1 ) ಪ್ರಶಾಂತ್ , ಪ್ರಾಯ : 24 ವರ್ಷ , ತಂದೆ : ಚಂದ್ರಶೇಖರ , ವಾಸ
: 2-56 , ಮೆಟ್ರೊಚಾಂಡಿ ಬೇರು ಮನೆ ಜಡ್ಕಲ್ ಪೋಸ್ಟ್ , ಜಡ್ಕಲ್ ಗ್ರಾಮ ಕುಂದಾಪುರ ತಾಲೂಕು , ಉಡುಪಿ
ಜಿಲೆ ,
2 ) ಸತ್ಯರಾಜ್ , ಪ್ರಾಯ : 32 ವರ್ಷ , ತಂದೆ : ಸೆಲ್ವಮ್ , ವಾಸ
: ಡೋ ನಂಬ್ರ 87 ಮೊದಲನೇ ಮುಖ್ಯ ರಸ್ತೆ , ಮೊದಲನೇ ಅಡ್ಡ ರಸ್ತೆ , ವೀರ ಭದ್ರ ನಗರ ಬಿಎಸ್ ಕೆ ಮೂರನೇ
ಹಂತ ಬೆಂಗಳೂರು
3 ) ರೋಹಿತ್ , ಪ್ರಾಯ : 27 ವರ್ಷ , ತಂದೆ : ದೇವದಾಸ್ , ವಾಸ : ಡೊ
ನಂಬ್ರ 4/196 , ಪಡಾರು ಮನೆ ತೆಂಕೆಡಪದವು ಗ್ರಾಮ , ಮಂಗಳೂರು ತಾಲೂಕು
4 ) ರಾಜೇಶ್ , ಪ್ರಾಯ : 37 ವರ್ಷ , ತಂದೆ : ಸದಾನಂದ , ವಾಸ : ಡೊ
ನಂಬ 1/29 , ನಂದಾ ಮನೆ , ಅಡರು ಗ್ರಾಮ ಮತ್ತು ಪೋಸ್ಟ್ , ಮಂಗಳೂರು ತಾಲೂಕು
5 ) ವಿರುಪಾಕ್ಷ , ಪ್ರಾಯ : 37 ವರ್ಷ , ತಂದೆ : ದಿ ರಂಗನಾಥ , ವಾಸ
: ಡೋ ನಂಬ್ರ 1/100 , ಕುಸುಮ ನಿಲಯ ಪದ್ರಂಗಿ , ಶಿಬ್ರಿಕೆರೆ ಪೋಸ್ಟ್ ತೆಂಕಎಡಪದವು ಗ್ರಾಮ ಮಂಗಳೂರು
ತಾಲೂಕು
6 ) ನಾಗರಾಜ್ , ಪ್ರಾಯ
: 31 ವರ್ಷ , ತಂದೆ : ವಿಠಲ್ , ವಾಸ : ಮಲಾರ್ ಕಾಪು ಮನೆ , ಕಾಪು ಗ್ರಾಮ ಉಡುಪಿ ತಾಲೂಕು