
ಉಡುಪಿ-ಗ್ರಾಮ ವಾಸ್ತವ್ಯದಿಂದ ಹೊಸ ಅನುಭವ ; ಸಚಿವ ಅಶೋಕ್
Sunday, February 20, 2022
ಕಂದಾಯ ಸಚಿವ ಆರ್ ಆಶೋಕ್ ಉಡುಪಿಯ ಕೆಂಜೂರಿನಲ್ಲಿ ನಿನ್ನೆ ಗ್ರಾಮ ವಾಸ್ತವ್ಯ ಮಾಡಿದ್ದು ನನ್ನ ಜೀವನದ ಹೊಸ ಅನುಭವ ಅಂತ ಸಂತಸ ವ್ಯಕ್ತಪಡಿಸಿದ್ದಾರೆ.
ನಿನ್ನೆ ಗ್ರಾಮ ವಾಸ್ತವ್ಯ ಮಾಡಿ, ಹಳ್ಳಿ ಜನ ಕಷ್ಟಗಳ ಆಲಿಸಿ, ಅವರ ಸಾಂಸ್ಕೃತಿಕ ವೈಭವನ್ನು ಕಣ್ತುಂಬಿಕೊಂಡು ಇಂದು, ಬೆಂಗಳೂರು ಹಿಂದಿರುವ ವೇಳೆ ಮಾತನಾಡಿದ, ಆರ್ ಆಶೋಕ್, ಮುಖ್ಯ ವಾಹಿನಿಗೆ ಬಾರದ ನೂರಾರು ಜನಾಂಗಗಳಿವೆ. ಕಣ್ಣ ಮುಂದೆ ಸಮಸ್ಯೆ ಇದ್ದರೂ ನಾವು ಕಣ್ಣುಮುಚ್ಚಿಕೊಂಡು ಓಡಾಡುತ್ತಿದ್ದೇವೆ ಅಸ್ಪೃಶ್ಯತೆ ಹೇಗಿರುತ್ತದೆ ಎಂಬ ಅನುಭವ ನನಗೆ ಆಗಿದೆ ಅಂತ ಹೇಳಿದರು.
ಜೀವನದಲ್ಲಿ ನೋಡದೆ ಇರುವ ಸತ್ಯಸಂಗತಿಗಳು ಅರಿವಾಗಿದೆ
ಕಂದಾಯ ಇಲಾಖೆಗೆ ಸಂಬಂಧಪಟ್ಟ ಎಲ್ಲವನ್ನು ಸ್ಥಳದಲ್ಲಿ ತೀರ್ಮಾನ ಮಾಡಿದ್ದೇನೆ. ನನ್ನದಲ್ಲದ ಇಲಾಖೆಗಳ ಕೆಲಸವನ್ನು ಮಾಡಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಹಿಂದುಳಿದ ಜಿಲ್ಲೆ ಯಾದಗಿರಿಗೆ ನನ್ನ ಮುಂದಿನ ಭೇಟಿ ತಿಳಿಸಿದರು. ಕುಡುಬಿ ಸಮುದಾಯದ ಮನೆಯಲ್ಲಿ ಬೆಲ್ಲ ನೀರು ಕುಡಿದಿದ್ದೇನೆ
ಸಮುದಾಯಕ್ಕೆ 50 ಎಕರೆ ಜಮೀನು ಅವರ ಹೆಸರಿನಲ್ಲಿ ಮಾಡುತ್ತಿದ್ದೇನೆ.ಕೊರಗ ಸಮುದಾಯದ ಯುವಕನಿಗೆ ಗ್ರಾಮ ಸಹಾಯಕ ಹುದ್ದೆ ನೀಡುತ್ತೇವೆ. ಯಾವ ಸಮಾಜವನ್ನು ನೀವು ದೂರ ಇಟ್ಟಿದ್ದೀರೋ ಯಾವ ಸಮುದಾಯ ಅಸ್ಪೃಶ್ಯತೆ ಇತ್ತು
ಅದೇ ಸಮುದಾಯದ ಯುವಕ ನಾಳೆಯಿಂದ ನಿಮ್ಮ ಗ್ರಾಮದಲ್ಲಿ ಗ್ರಾಮಸಹಾಯಕ ಅಂತ ಅಶೋಕ್ ಕೊರಗ ಸಮುದಾಯಕ್ಕೆ ಧೈರ್ಯ ತುಂಬಿದ್ದಾರೆ..