ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ( weekend curfew) ಜಾರಿ
Tuesday, January 4, 2022
ಬೆಂಗಳೂರು; ರಾಜ್ಯದಲ್ಲಿ ಈ ವಾರದಿಂದಲೇ ವೀಕೆಂಡ್ ಕರ್ಪ್ಯೂ ಜಾರಿ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಇಂದು ನಡೆದ ಸಭೆಯ ಬಳಿಕ ಸಚಿವರಾದ ಸುಧಾಕರ್ ಮತ್ತು ಅಶೋಕ್ ಅವರು ಈ ಮಾಹಿತಿ ನೀಡಿದರು. ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆವರೆಗೆ ಕರ್ಪ್ಯೂ ಜಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಪ್ರತಿಭಟನೆ, ಜಾತ್ರೆ ನಡೆಸುವಂತಿಲ್ಲ, ರಾಜಕೀಯ ರ‌್ಯಾಲಿ ನಡೆಸುವಂತಿಲ್ಲ ಎಂದು ಅವರು ತಿಳಿಸಿದ್ದಾರೆ. ದೇವಸ್ಥಾನಗಳಲ್ಲಿ 50 ಜನರಿಗೆ ಅವಕಾಶವಿದ್ದು, ಪೂಜೆ, ಪುರಸ್ಕಾರ ನಡೆಸಬಹುದು ಎಂದು ತಿಳಿಸಿದ್ದಾರೆ.