ಈಕೆಗೆ ಮದುವೆಯಾಗಿದೆ.., ಪಾಕಿಸ್ತಾನದಲ್ಲೊಬ್ಬ ಪ್ರಿಯಕರನಿದ್ದಾನೆ..., ಗಡಿದಾಟುವಾಗ ಸಿಕ್ಕಿಬಿದ್ಲು!
Friday, January 7, 2022
ಅಮೃತಸರ: ವಿವಾಹಿತ ಮಹಿಳೆಯೊಬ್ಬಳು ಪಾಕಿಸ್ತಾನದಲ್ಲಿನ ಪ್ರಿಯಕರನನ್ನು ಭೇಟಿ ಮಾಡಲು ವಾಘಾ ಗಡಿ ದಾಟುತ್ತಿದ್ದ ವೇಳೆ ಅಮೃತಸರ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ರಾಜಸ್ಥಾನದ 25 ವರ್ಷದ ಈ ಮಹಿಳೆಗೆ ಮದುವೆಯಾಗಿ ಮಗು ಕೂಡ ಇದೆ. ರಾಜಸ್ಥಾನದಲ್ಲಿ ನೆಲೆಸಿರುವ ಈಕೆಗೆ ಆನ್ಲೈನ್ನಲ್ಲಿ ಲುಡೋ ಗೇಮ್ ಆಡುವಾಗ ಪಾಕಿಸ್ತಾನದ ಯುವಕನೊಬ್ಬ ಪರಿಚಯವಾಗಿದ್ದಾನೆ. ನಂತರ facebook ಮತ್ತು whatsapp ನಲ್ಲಿ ಸಂಪರ್ಕ ಹೊಂದಿದ್ದು, ಪ್ರೀತಿಯಲ್ಲಿ ಬಿದ್ದಿದ್ದರು.
ಈ ಮಹಿಳೆ ಪ್ರಿಯಕರನಿಗಾಗಿ ತನ್ನ ಕುಟುಂಬವನ್ನು ಬಿಟ್ಟು ಹೋಗಲು ಸಿದ್ಧಳಾಗಿ ವಾಘಾ ಗಡಿಯನ್ನು ತಲುಪಲು ರಿಕ್ಷಾದಲ್ಲಿ ಹೋಗುತ್ತಿದ್ದಳು. ಪಾಕಿಸ್ತಾನ ಯುವಕ whatsappಗೆ ಕರೆ ಮಾಡಿ ಮಹಿಳೆಯನ್ನು ವಾಘಾ ಗಡಿಯಲ್ಲಿ ಡ್ರಾಪ್ ಮಾಡುವಂತೆ ರಿಕ್ಷಾ ಚಾಲಕನಿಗೆ ಹೇಳಿದ್ದಾನೆ. ರಿಕ್ಷಾ ಚಾಲಕನಿಗೆ ಅನುಮಾನ ಬಂದು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ.
ಮಾಹಿತಿ ಪಡೆದ ಅಮೃತಸರ ಪೊಲೀಸರು ಮಹಿಳೆಯನ್ನು ವಿಚಾರಿಸಿದಾಗ ಪಾಕಿಸ್ತಾನದ ಯುವಕ ನನ್ನನ್ನು ಪಾಕಿಸ್ತಾನಕ್ಕೆ ಆಹ್ವಾನಿಸಿದ್ದು ಅಲ್ಲಿಗೆ ಹೇಗೆ ಬರಬಹುದು ಎಂದು ಕೇಳಿದಾಗ, ಅವರು ನನಗೆ ವಾಘಾ ಗಡಿಗೆ ಬರಲು ಹೇಳಿದ್ದಾನೆ ಎಂದು ಮಹಿಳೆ ತಿಳಿಸಿದ್ದು, ಇದೀಗ ಗಡಿ ದಾಟುತ್ತಿದ್ದ ಮಹಿಳೆಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.