ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿ ಜೊತೆಗೆ LIPLOCK ಮಾಡಿದ ಮಹಿಳಾ ನ್ಯಾಯಾಧೀಶೆ!
Friday, January 7, 2022
ಅರ್ಜೆಂಟೈನಾ: ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿ ಜೊತೆಗೆ ಮಹಿಳಾ ನ್ಯಾಯಾಧೀಶೆ ಲಿಪ್ ಲಾಕ್ ಮಾಡಿ ಮುತ್ತಿಕ್ಲಿರುವ ವಿಡಿಯೋ ವೈರಲ್ ಆಗಿದೆ.
ಅರ್ಜೆಂಟೈನಾದಲ್ಲಿ ಈ ಘಟನೆ ನಡೆದಿದ್ದು ಪೊಲೀಸ್ ಅಧಿಕಾರಿಯನ್ನು ಕೊಲೆಗೈದ ಅಪರಾಧಿಗೆ ಲಿಪ್ ಲಾಕ್ ಮಾಡಿರುವ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ.
ಕ್ರಿಶ್ಚಿಯನ್ ಬುಸ್ಟೊಸ್ ಎಂಬ ಅಪರಾಧಿಗೆ ನ್ಯಾಯಾಧೀಶೆ ಮರಿಲ್ ಸೌರೆಜ್ ಲಿಪ್ ಲಾಕ್ ಮಾಡಿ ಮುತ್ತು ನೀಡಿದ್ದಾರೆ. ಈ ಅಪರಾಧಿ ಪರ ತನ್ನ ಅಭಿಪ್ರಾಯ ಮಂಡಿಸುತ್ತಿದ್ದ ಈ ನ್ಯಾಯಾಧೀಶೆ ಮರಿಲ್ ಸೌರೆಜ್ ಈ ರೀತಿ ಲಿಪ್ ಲಾಕ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಬೆಳಕಿಗೆ ಬರುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ನ್ಯಾಯಾಧೀಶೆ, ಆತನ ಬಗ್ಗೆ ಕೃತಿಯೊಂದನ್ನು ಬರೆಯುತ್ತಿದ್ದು ಆತನನ್ನು ಮಾತನಾಡಿಸಲು ಜೈಲಿಗೆ ಹೋದಾಗ ಮುತ್ತಿಕ್ಕಿದ್ದು ಹೌದು ಎಂದು ತಿಳಿಸಿದ್ದಾರೆ.
'ಪೊಲೀಸ್ ಅಧಿಕಾರಿಯೊಬ್ಬರನ್ನು ಕೊಲೆಗೈದು ಶಿಕ್ಷೆಗೆ ಗುರಿಯಾಗಿದ್ದ ಕ್ರಿಶ್ಚಿಯನ್ ಬುಸ್ಟೊಸ್ಗೆ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಲು ಈ ನ್ಯಾಯಾಧೀಶೆ ಮರಿಲ್ ಸೌರೆಜ್ ಪ್ರಯತ್ನಿಸುತ್ತಿದ್ದರಂತೆ. ಅದಕ್ಕಾಗಿ ರಚಿಸಲಾಗಿದ್ದ 4 ಮಂದಿಯ ನ್ಯಾಯಾಧೀಶರ ಸಮಿತಿಯಲ್ಲಿ ಸೌರೆಜ್ ಕೂಡ ಇದ್ದು ಆತನಿಗೆ ಜೀವಾವಧಿ ಶಿಕ್ಷೆ ವಿಧಿಸುವುದನ್ನು ಅನೇಕ ಸಲ ಇವರು ವಿರೋಧಿಸಿಆತನ ಪರ ವಿಶೇಷ ಒಲವು ತೋರಿದ್ದರು.
ಇದೀಗ ಜೈಲಿನಲ್ಲಿಯೇ ಈ ಅಪರಾಧಿಗೆ LIPLOCK ಮಾಡಿರುವ ವಿಡಿಯೋ VIRAL ಆಗುತ್ತಿದ್ದಂತೆ ಪ್ರಕರಣದ ತನಿಖೆ ನಡೆಸಲು ಸೂಚನೆ ನೀಡಲಾಗಿದೆ.