
ಉಡುಪಿ ; ಸ್ಕೂಟರ್ ನಲ್ಲಿ ಪೆಟ್ರೋಲ್ ಖಾಲಿಯಾದ ಬಳಿಕ ವಿದ್ಯಾರ್ಥಿ - ವಿದ್ಯಾರ್ಥಿನಿಯ ಬೀದಿ ರಂಪಾಟ- video ವೈರಲ್
Saturday, January 8, 2022
ಉಡುಪಿ; ಉಡುಪಿ ಜಿಲ್ಲೆಯ ಪಡುಬಿದ್ರೆಯಲ್ಲಿ ವಿದ್ಯಾರ್ಥಿ ಜೋಡಿಗಳಿಬ್ಬರು ನಡೆಸಿದ ಬೀದಿ ರಂಪಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ಕೂಟರ್ ನಲ್ಲಿ ಯುವತಿಯೊಂದಿಗೆ ಪ್ರಯಾಣಿಸುತ್ತಿದ್ದ ವೇಳೆ ಪಡುಬಿದ್ರೆಯಲ್ಲಿ ಪೆಟ್ರೋಲ್ ಖಾಲಿಯಾಗಿದೆ. ಈ ಸಂದರ್ಭದಲ್ಲಿ ಇವರಿಬ್ಬರ ನಡುವೆ ಬೀದಿಕಾಳಗ ನಡೆದಿದೆ.
ಸಾರ್ವಜನಿಕ ಪ್ರದೇಶದಲ್ಲಿ ಬೀದಿ ರಂಪಾಟವನ್ನು ಈ ವಿದ್ಯಾರ್ಥಿಗಳು ನಡೆಸಿದ್ದು ಇದು ಜನರಿಗೆ ಪುಕ್ಕಟ್ಟೆ ಮನರಂಜನೆಯನ್ನು ನೀಡಿದೆ.
ವಿದ್ಯಾರ್ಥಿಗಳ ಬೀದಿ ರಂಪಾಟದ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿದಾಗ ಪೊಲೀಸರಿಗೆ ಆವಾಜ್ ಹಾಕಿದ್ದಾರೆ. ನಾವು MBBS ವಿದ್ಯಾರ್ಥಿಗಳು. ನಮ್ಮ ತಂದೆ ತಾಯಿ ಯಾರೆಂಬುದನ್ನು ನಾಳೆ ಹೇಳ್ತೇವೆ. ನಮ್ಮ ಮೈಮುಟ್ಟಬೇಡಿ ಎಂದು ಬೆದರಿಸಿದ್ದಾರೆ.
ಬಳಿಕ ಅವರನ್ನು ಆ್ಯಂಬುಲೆನ್ಸ್ ಮೂಲಕ ಮಣಿಪಾಲಕ್ಕೆ ಕಳುಹಿಸಲಾಗಿದೆ.