ಕೊರಗಜ್ಜ ದೈವ ವೇಷ ಧರಿಸಿ ಮದುಮಗನಿಂದ ಅವಹೇಳನ ಪ್ರಕರಣ- ಕ್ಷಮೆಯಾಚನೆ ಮಾಡಿದ video ವೈರಲ್
Saturday, January 8, 2022
ಮಂಗಳೂರು; ಕೊರಗಜ್ಜ ದೈವದ ವೇಷ ಧರಿಸಿ ಮದುಮಗ ಅವಹೇಳನ ಮಾಡಿದ ಪ್ರಕರಣದಲ್ಲಿ ವರ ಕ್ಷಮೆಯಾಚನೆ ಮಾಡಿದ ವಿಡಿಯೋ ಇದೀಗ ವೈರಲ್ ಆಗಿದೆ.
ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳದ ಬಾಷಿತ್ ಎಂಬವನು ವಿಟ್ಲದ ಸಾಲೆತ್ತೂರಿನ ವಧುವಿನ ಜೊತೆಗೆ ವಿವಾಹವಾಗಿದ್ದನು. ವಿವಾಹ ದಿನ ರಾತ್ರಿ ಸಾಲೆತ್ತೂರಿನ ವಧುವಿನ ಮನೆಗೆ ವರ ಬಂದ ಸಂದರ್ಭದಲ್ಲಿ ಆತನಿಗೆ ಕೊರಗಜ್ಜ ದೈವದ ವೇಷ ಹಾಕಲಾಗಿತ್ತು. ಇದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದ್ದು, ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಈ ಕೃತ್ಯವೆಸಗಿದ ವರ ಕ್ಷಮೆಯಾಚನೆ ಮಾಡಿರುವ ವಿಡಿಯೋ ವೈರಲ್ ಆಗಿದೆ.