ಟೆಸ್ಟ್ ನಾಯಕತ್ವಕ್ಕೆ ವಿದಾಯ ಹೇಳಿದ ವಿರಾಟ್ ಕೊಹ್ಲಿ
Saturday, January 15, 2022
ನವದೆಹಲಿ: ಭಾರತದ 20-20 ಹಾಗೂ ಏಕದಿನ ಕ್ರಿಕೆಟ್ ನಾಯಕತ್ವವನ್ನು ತ್ಯಜಿಸಿದ 3 ತಿಂಗಳೊಳಗೆ ವಿರಾಟ್ ಕೊಹ್ಲಿ ಇಂದು ಟೆಸ್ಟ್ ನಾಯಕತ್ವಕ್ಕೂ ವಿದಾಯ ಹೇಳಿದ್ದಾರೆ.
ಈ ಮೂಲಕ ಕೊಹ್ಲಿ ಎಲ್ಲ 3 ಮಾದರಿಯ ಕ್ರಿಕೆಟ್‌ನ ನಾಯಕತ್ವದಿಂದ ಕೆಳಗಿಳಿದಿದ್ದು, ಅಭಿಮಾನಿಗಳಿಗೆ ನಿರಾಶೆಯನ್ನು ಮೂಡಿಸಿದ್ದಾರೆ.
ವಿರಾಟ್ ಕೊಹ್ಲಿ ಟ್ವಿಟರ್‌ನ ಮೂಲಕ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ
ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಭಾರತವು 1-2 ಅಂತರದಿಂದ ಸೋತ ಮರುದಿನವೆ ವಿರಾಟ್ ಕೊಹ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆ.
2021 ಡಿಸೆಂಬರ್‌ನಲ್ಲಿ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಕೊಹ್ಲಿ ಬದಲಿಗೆ ರೋಹಿತ್ ಶರ್ಮಾರನ್ನು ಪೂರ್ಣಕಾಲಿಕ ನಾಯಕನನ್ನಾಗಿ BCCI ಆಯ್ಕೆ ಮಾಡಿತ್ತು.
— Virat Kohli (@imVkohli) January 15, 2022