-->
ನಿಮ್ಮ ಬೆತ್ತಲೆ ಪೊಟೋ ಇದೆ.., ಅಸಲು ಜೊತೆಗೆ ಬಡ್ಡಿ ಕೊಡಿ ಅಂತಾರೆ... ಲೋನ್ App ಬಗ್ಗೆ ಇರಲಿ ಎಚ್ಚರ! ( Video)

ನಿಮ್ಮ ಬೆತ್ತಲೆ ಪೊಟೋ ಇದೆ.., ಅಸಲು ಜೊತೆಗೆ ಬಡ್ಡಿ ಕೊಡಿ ಅಂತಾರೆ... ಲೋನ್ App ಬಗ್ಗೆ ಇರಲಿ ಎಚ್ಚರ! ( Video)

ಮಂಗಳೂರು; ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸಿಗುವ ಲೋನ್ App ನಲ್ಲಿ ಸಾಲ ಪಡೆದುಕೊಂಡು ಇತ್ತೀಚೆಗೆ ಆತ್ಮಹತ್ಯೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಈ ಪ್ರಕರಣವು loan app ನ ನೀಚತನವನ್ನು ಬಯಲು ಮಾಡಿದೆ.

ಆತ್ಮಹತ್ಯೆ ಮಾಡಿಕೊಂಡ ಸುಶಾಂತ್ ಲೋನ್ ಆ್ಯಪ್ ಗಳಲ್ಲಿ ಸಾಲವನ್ನು ಪಡೆದುಕೊಂಡಿದ್ದು ಈ ಲೋನ್ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಲೋನ್ ಆ್ಯಪ್ ನಲ್ಲಿ ಸಾಲ ಪಡೆದ ಬಳಿಕ ಲೋನ್ ನೀಡಿದ ಆ್ಯಪ್ ನವರು ಈತನಿಗೆ ನಿನ್ನ ಬೆತ್ತಲೆ ಪೊಟೋ ಇದೆ. ನಿನ್ನ ಮೊಬೈಲ್ ‌ನಲ್ಲಿರುವ ಕಾಂಟ್ಯಾಕ್ಟ್ ಲಿಸ್ಟ್ ನವರಿಗೆ ವಾಟ್ಸಪ್ ಮಾಡಲಾಗುವುದು ಎಂದು ಹೇಳಿ ಅವಾಚ್ಯ ಪದಗಳಿಂದ ಬೈದಿದ್ದಾರೆ. ಮರ್ಯಾದೆ ಹೋಗುವ ಭೀತಿಯಲ್ಲಿ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೇ ರೀತಿ ಪ್ರಕರಣ ಇತ್ತೀಚಿಗೆ ಉಡುಪಿ ಜಿಲ್ಲೆಯಲ್ಲಿ ನಡೆದಿತ್ತು.

ಲೋನ್ ಆ್ಯಪ್ ಹೇಗೆ ಕಾರ್ಯನಿರ್ವಹಿಸುತ್ತದೆ?

ಸುಮಾರು 600 ಲೋನ್ ಆ್ಯಪ್ ಗಳಿದ್ದು ಇವುಗಳು ಆರ್ ಬಿ ಐ ಮಾನ್ಯತೆ ಪಡೆದುಕೊಂಡಿಲ್ಲ. ಜಾಹೀರಾತು ಮೂಲಕ ಯುವಜನರನ್ನು ಮೋಡಿ ಮಾಡುವ ಇವುಗಳು ತಕ್ಷಣದಲ್ಲೆ ಲೋನ್ ನೀಡುವ ಭರವಸೆ ನೀಡಿ ಸೆಳೆಯುತ್ತದೆ. ಗೂಗಲ್ ಪ್ಲೆ ಸ್ಟೋರ್ ನಲ್ಲಿ ಸಿಗುವ ಈ ಆ್ಯಪ್ install ಮಾಡಿದಾಗ ಕೆಲವೊಂದು ಆ್ಯಕ್ಸೆಸ್ ಗಳನ್ನು ಕೇಳುತ್ತದೆ. ಕಾಂಟ್ಯಾಕ್ಟ್ ಲಿಸ್ಟ್ ಓದುವ access ಕೇಳುತ್ತದೆ, ಗ್ಯಾಲರಿ ನೋಡುವ access ಕೇಳುತ್ತದೆ, ಕ್ಯಾಮರ ಬಳಸುವ ಆ್ಯಕ್ಸೆಸ್ ಕೇಳುತ್ತದೆ. 
ಇದನ್ನು allow ಕೊಟ್ಟರೆ ನಮ್ಮ ಮೊಬೈಲ್ ನ್ನು ಪಾಸ್ ವರ್ಡ್ ತೆಗೆದು ಅವರ ಕೈಯಲ್ಲಿ ಕೊಟ್ಟಂತೆ. ಇದನ್ನು ಪಡೆದುಕೊಂಡು ಲೋನ್ ನೀಡುವ ಈ app ಸಾಲಕ್ಕೆ 30 , 40 ರಷ್ಟು ಬಡ್ಡಿಯನ್ನು ಪಡೆದು ಕೊಳ್ಳುತ್ತದೆ. ಹಣ ನೀಡದಿದ್ದರೆ ಗ್ಯಾಲರಿಯಲ್ಲಿ ಇರುವ ಖಾಸಗಿ ಪೊಟೋವನ್ನು ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿರುವವರಿಗೆ ಕಳುಹಿಸುವ ಬೆದರಿಕೆ ಹಾಕುತ್ತದೆ. ಕ್ಯಾಮರ ಆ್ಯಕ್ಸೆಸ್ ಕೇಳಿರುವುದರಿಂದ ಮೊಬೈಲ್ ಕ್ಯಾಮರದಿಂದಲೇ ಗುಟ್ಟಾಗಿ ಖಾಸಗಿ ಪೊಟೋ ತೆಗೆಯುವ ಸಾಧ್ಯತೆ ಗಳು ಇರುತ್ತದೆ. ಮರ್ಯಾದೆ ಹೋಗುತ್ತದೆ ಎಂದು ಲೋನ್ ಆ್ಯಪ್ ಕೇಳಿದ ಹಣ ನೀಡಿ ಹಲವರು ಕೈ ಸುಟ್ಟುಕೊಂಡಿದ್ದಾರೆ


ಈ ಬಗ್ಗೆ ಪ್ರತಿಕ್ರೀಯಿಸಿರುವ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ಆರ್ ಬಿ ಐ ಮಾನ್ಯತೆ ಇಲ್ಲದಿರುವ ಇಂತಹ ಆ್ಯಪ್ ಗಳನ್ನು ಬಳಸದಂತೆ ಮನವಿ ಮಾಡಿದ್ದಾರೆ. ( ವಿಡಿಯೋ ನೋಡಿ)





Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99