ಪುತ್ತೂರಿನಲ್ಲಿ ಅಮ್ಮನನ್ನೆ 2 ಬಾರಿ ರೇಪ್ ಮಾಡಿದ ಮಗ
Friday, January 14, 2022
ಪುತ್ತೂರು: ತಾಯಿಯ ಮೇಲೆಯೇ ಮಗ ಅತ್ಯಾಚಾರ ಎಸಗಿದ ಪೈಶಾಚಿಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಕುರಿಕ್ಕಾರದಲ್ಲಿ ನಡೆದಿದೆ.
ಜ .12 ರ ತಡ ರಾತ್ರಿ ತಡ ರಾತ್ರಿ ಹಾಗೂ ಮರು ದಿನ ಬೆಳಿಗ್ಗೆ 2 ಬಾರಿ ತಾಯಿಯನ್ನು ಮಗನೆ ಅತ್ಯಾಚಾರ ನಡೆಸಿದ್ದಾನೆ. ಮಗನ ಪೈಶಾಚಿಕ ಕೃತ್ಯದಿಂದ ಸಂತ್ರಸ್ತ ತಾಯಿ ತೀವ್ರವಾಗಿ ಅಸ್ವಸ್ಥಗೊಂಡಿದ್ದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
58 ವರ್ಷದ ಸಂತ್ರಸ್ತ ಮಹಿಳೆಯೂ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಗನ ವಿರುದ್ಧ ದೂರು ನೀಡಿದ್ದಾರೆ. ಆರೋಪಿ ಮಗನ ವಿರುದ್ಧ ಐಪಿಸಿ ಸೆಕ್ಷನ್ 376(2)(n)506 ರಂತೆ ಪ್ರಕರಣ ದಾಖಲಾಗಿದೆ.
ಜ.12ರಂದು ಎಂದಿನಂತೆ ರಾತ್ರಿ ಊಟ ಮಾಡಿ ಆರೋಪಿಯು ತನ್ನ ಕೋಣೆಯಲ್ಲಿ ಮಲಗಿದ್ದು 3 ಗಂಟೆ ನಸುಕಿನ ವೇಳೆ ತಾಯಿ ಮಲಗಿದ್ದ ರೂಮ್ ತೆರಳಿ ಅತ್ಯಾಚಾರ ಗೈದಿದ್ದಾನೆ. ಈ ಸಂದರ್ಭ ತಾಯಿಯೂ ಕಿರುಚಾಡಿ ತಳ್ಳಿ ಹಾಕಲು ಯತ್ನಿಸಿದ್ದು ಆ ವೇಳೆ ಆರೋಪಿಯು ತನ್ನ ತಾಯಿಯ ಬಾಯಿಯನ್ನು , ಬಟ್ಟೆಯಿಂದ ಒತ್ತಿ ಹಿಡಿದು ಗೊಬ್ಬೆ ಹಾಕದಂತೆ ಬೆದರಿಸಿ ಅತ್ಯಾಚಾರ ಎಸಗಿದ್ದಾನೆ.
ಇದಾದ ಬಳಿಕ ಜ.13ರಂದು ಬೆಳಿಗ್ಗೆ ಮತ್ತೊಮ್ಮೆ ಅತ್ಯಾಚಾರ ಮಾಡಿದ್ದಾನೆ